ಕೊರೊನ: ಪಾಠ ಬೇಡ, ಆಟ ಬೇಕು!!
ಇಂದು ಶೆೈಕ್ಷಣಿಕ ವಲಯದಲ್ಲಿ ಸಾಕಷ್ಟು ಚಚೆ೯ಯಾಗುತ್ತಿರುವ ವಿಶೇಷವೆಂದರೆ ಶಾಲಾ ಕಾಲೇಜುಗಳು ತೆರೆಯಬೇಕಾ? ಅಥವಾ ಬೇಡವೇ ? ಸರಕಾರಕ್ಕಂತೂ ಇದು ನಂಬರ್ ಒನ್ ಚಿಂತೆಗೆ ಎಡೆಮಾಡಿ ಕೊಟ್ಟ ಸಂಗತಿಯೂ ಹೌದು.
ಮಾಧ್ಯಮಗಳಲ್ಲಿ ದಿನ ನಿತ್ಯವೂ ಇದರದ್ದೇ ಚಚೆ೯. ಶಿಕ್ಷಣ ತಜ್ಞರು ಸದ್ಯಕ್ಕೆ ಬೇಡವೆಂದರೆ.. ಹೆತ್ತವರು ತಮ್ಮಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರಿಲ್ಲ.. ಅನ್ನುವ ಕುಾಗು ಇನ್ನೊಂದು ಕಡೆ. ಈ ಎಲ್ಲಾ ಕಥೆ ವ್ಯಥೆಗಳ ಮಧ್ಯೆ ಕೊರೊನಾದ ವಾಸ್ತವಿಕತೆಯ ವಿಚಾರವೇ ಬೇರೆ..!!
ಆಶ್ಚರ್ಯವಾದರೂ ಸತ್ಯ. ಶಾಲೆ ಕಾಲೇಜುಗಳಿಗೆ ಹೇೂಗದ ಚಿಕ್ಕ ಚಿಕ್ಕ ಮಕ್ಕಳು ಶಾಲಾ ಕಾಲೇಜು ಮೆೈದಾನಗಳಲ್ಲಿ ಐವತ್ತು ಹೆಚ್ಚು ಮಕ್ಕಳು ಸಂಜೆ ಹೊತ್ತು ಯಾವುದೇ ಮಾಸ್ಕಕಾಗಲಿ ಸಾಮಾಜಿಕ ಅಂತರವೇ ಇಲ್ಲದೇ ಬೆರೆತು ಆಡುವುದನ್ನು ನೇೂಡಿದರೆ.. ನಾವೇಕೆ ಶಾಲೆ ಆರಂಭಿಸಬಾರದು ಅನ್ನಿಸುತ್ತದೆ. ಹಾಗಾದರೆ ಪಾಠ ಕೇಳುವಾಗ ಕೊರೊನ ಹಿಡಿದು ಕೊಳ್ಳುತ್ತದೆ ಹೊರತು ಆಟವಾಡುವಾಗ ಅಲ್ಲ.. ಇದು ಹೆತ್ತವರ ಮನ:ಸ್ಥಿತಿವೊ.
ಬೇಜಬ್ದಾರಿತನವೊ? ಮಕ್ಕಳ ನಿಲ೯ಕ್ಷವೊ? ಅನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಸರಕಾರವೇನೊ ಆದೇಶ ನೀಡಿದೆ ಸಾವ೯ಜನಿಕ ಸ್ಥಳಗಳಲ್ಲಿ ಮಾಸ್ಕ ಧರಿಸದಿದ್ದರೆ ಇನ್ನೂರು; ಸಾವಿರ ದಂಡ ಹಾಕಿ.. ಹಾಗಾಗಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಬಸ್ಸು ನಿಲ್ದಾಣ.. ಮಾರುಕಟ್ಟೆಯಯಂತಹ ಪ್ರದೇಶಗಳಲ್ಲಿ ಕಾರ್ಯ ಚರಣೆ ನಡೆಸುತ್ತಿದ್ದಾರೆ ಹೊರತು ಶಾಲಾ ಕಾಲೇಜುಗಳ ಆಟದ ಮೆೈದಾನದಲ್ಲಿ ಸಂಜೆ ಹೊತ್ತು ಮಾಸ್ಕ ಧರಿಸದೇ ನಿರಾಳವಾಗಿ ಸ್ವಚ್ಛಂದದಿಂದ ಮೆೈ ಮರೆತು ಆಟವಾಡುವುದನ್ನು ನೇೂಡಿದರೆ ನಾವೆಷ್ಟು ಕೊರೊನ ತಡೆಯುವುದರಲ್ಲಿ ಆಸಕ್ತಿ ವಹಿಸುತ್ತಿದ್ದೇವೆ ಅನ್ನುವ ಸತ್ಯ ಅರಿವಾಗುತ್ತದೆ. ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಲಿ ಅನ್ನುವುದು ನಮ್ಮ ಮಕ್ಜಳ ಹಿತ ದೃಷ್ಟಿಯ ಕೇೂರಿಕೆಯೂ ಹೌದು.
ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ
During this difficult time of sevier spreading of Covid 19, wearing mask or face cover is must and should for every body, every where. Concerned higher authorities and the departments should take immediate action for the implementation of the government’s guide lines.