ಉಡುಪಿ: ವಿದೇಶದಲ್ಲಿ ಉದ್ಯೋಗ ಕೊಡುವುದಾಗಿ ನಂಬಿಸಿ ಮಹಿಳೆಗೆ 7.65 ಲಕ್ಷ ರೂ.ವಂಚನೆ
ಉಡುಪಿ, ಡಿ.16: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಮಾ.ವಿ ಎಂಬವರ ವಾಟ್ಸಾಪ್‌ಗೆ 2022ರ ಆ.20ರಂದು ಅಪರಿಚಿತ ವ್ಯಕ್ತಿ ವಿದೇಶದಲ್ಲಿ ಉದ್ಯೋಗ ಕೊಡಿಸುವ ಬಗ್ಗೆ ಸಂದೇಶ ಕಳುಹಿಸಿದ್ದು ಇದನ್ನು ನಂಬಿದ ಇಮಾ ಅಪರಿಚಿತ ವ್ಯಕ್ತಿ ಸೂಚಿಸಿದ ಬ್ಯಾಂಕ್ ಉಳಿತಾಯ ಖಾತೆಗೆ ಆ.23ರಿಂದ ನ.7ರ ತನಕ ಹಂತ ಹಂತವಾಗಿ ಒಟ್ಟು 7,65,000ರೂ. ಹಣವನ್ನು ಆನ್‌ಲೈನ್ ಹಾಗೂ ಡೆಪಾಸಿಟ್ ಮೂಲಕ ವರ್ಗಾವಣೆ ಮಾಡಿದ್ದರು. ಆದರೆ ಈವರೆಗೆ ಇಮಾ ಅವರಿಗೆ ವಿದೇಶದಲ್ಲಿ ಉದ್ಯೋಗಕ್ಕೆ ವೀಸಾ ನೀಡದೇ, ಹಣವನ್ನೂ ಹಿಂದಿರುಗಿಸದೇ ವಂಚಿಸಿರುವುದಾಗಿ ದೂರಲಾಗಿದೆ