ಮಂಗಳೂರು: ತುಳುನಾಡ ಬೋರ್ ವೆಲ್ ಮಾಲಕ ಎಂ.ಎ. ಸಿ.ರೈ ನಿಧನ
ಮಂಗಳೂರಿನ ತುಳುನಾಡ ಬೋರ್‌ವೆಲ್ ಇದರ ಮಾಲಕರಾದ ಎಂ.ಎಂ.ಸಿ.ರೈ (55) ಕಿಡ್ನಿ ವೈಫಲ್ಯದಿಂದ ಇಂದು ನಿಧನರಾದರು.
ಆಟ, ಕೂಟ ಎರಡರಲ್ಲೂ ಪ್ರಾವೀಣ್ಯತೆ ಹೊಂದಿದ ಇವರು ಹವ್ಯಾಸಿ ಬಳಗ, ಕದ್ರಿ, ತಂಡದ ಕಲಾವಿದರಾಗಿ ಕಲಾವಲಯದಲ್ಲಿ ಗುರುತಿಸೊಕೊಂಡಿದ್ದರು. ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಅತ್ಯುತ್ತಮ ಹವ್ಯಾಸಿ ಕಲಾವಿದರಾದ ಇವರು ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದರು. ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.