ಉಡುಪಿಯಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ 64ನೇ ಹುಟ್ಟುಹಬ್ಬ ಆಚರಣೆ
ಉಡುಪಿ “ಆಶಾ ನಿಲಯ” ವಿಶೇಷ ಮಕ್ಕಳ ಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕೇಕ್ ಕತ್ತರಿಸಿ ವಿಶೇಷ ಮಕ್ಕಳಿಗೆ ತಿನ್ನಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ. ಶೆಟ್ಟಿಯವರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಈ ರಾಜ್ಯ ಕಂಡಂತಹ ಅಪರೂಪದ ರಾಜಕಾರಣಿ, ಗ್ರಾಮ ವಾಸ್ತವ್ಯ, ಜನತಾ ದರ್ಶನ, ರೈತರ ಸಾಲ ಮನ್ನಾ, ವಿಧವಾ ವೇತನ ಹೆಚ್ಚಳ, ಅಂಗವಿಕಲರ ವೇತನ ಹೆಚ್ಚಳ, ಹೀಗೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಯನ್ನು ಮಾಡಿದಂತಹ ಹಾಗೂ ಚಿಂತನೆ ಉಳ್ಳಂತಹ ವ್ಯಕ್ತಿ, ರೈತರ ಕಣ್ಮಣಿ, ಬಡವರ ಬಂಧು ಅವರಿಗೆ ದೇವರು ಆಯುಷ್ಯ ಆರೋಗ್ಯ ಕೊಟ್ಟು ಇನ್ನಷ್ಟು ರಾಜ್ಯದ ಜನತೆಯ ಸೇವೆ ಮಾಡುವಂತಹ ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸಿದರು.
ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಇದ್ದು ವಿಶೇಷ ಮಕ್ಕಳಿಗೆ ಕ್ಷೀರ ಭಾಗ್ಯ ಇಲ್ಲದಿದ್ದಾಗ ಸಂಬಂಧಪಟ್ಟವರ ಮನವಿಯ ಮೇರೆಗೆ ಆ ಕ್ಷಣದಲ್ಲಿ ಇಡೀ ರಾಜ್ಯದ ವಿಶೇಷ ಮಕ್ಕಳ ಶಾಲೆಗೆ ಕ್ಷೀರ ಭಾಗ್ಯವನ್ನು ನೀಡಿದವರು ಕುಮಾರಸ್ವಾಮಿಯವರು ಎಂದು ಸ್ಮರಿಸಿದರು,ಈಗಲೂ ಈ ಯೋಜನೆ ವಿಶೇಷ ಮಕ್ಕಳಿಗೆ ಚಾಲ್ತಿಯಲ್ಲಿದೆ.
ಮಕ್ಕಳಿಗೆ ಶಾಲಾ ಸಿಬ್ಬಂದಿಗಳಿಗೆ ಹಾಗೂ ಇನ್ನಿತರವರಿಗೆ ಫೋಟೋಪಚಾರ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ನಾಯಕರುಗಳಾದ ವಾಸುದೇವ ರಾವ್, ಶಾಲಿನಿ ಶೆಟ್ಟಿ ಕೆಂಚನೂರು, ಜಯರಾಮ ಆಚಾರ್ಯ, ಜಯಕುಮಾರ್ ಪರ್ಕಳ, ಇಕ್ಬಾಲ್ ಅತ್ರಾಡಿ, ಶ್ರೀಕಾಂತ್ ಹೆಬ್ರಿ, ಸಂಜಯ್ ಕುಮಾರ್, ರಾಮರಾವ್, ವಿಶಾಲಾಕ್ಷಿ ಶೆಟ್ಟಿ , ರಂಗ ಎನ್ ಕೋಟ್ಯಾನ್, ರಂಜಿತ್, ಚಂದನ್, ಗಣೇಶ್, ಸೃಜನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.