ಸಂಸತ್ ಮೇಲೆ ದಾಳಿ ಕೇಂದ್ರ ಸರಕಾರದ ಆಡಳಿತದ ನಿಷ್ಕ್ರಿಯತೆಯ ಕೈಗನ್ನಡಿ- ಸುರೇಶ್ ಶೆಟ್ಟಿ
ಉಡುಪಿ: ನಮ್ಮ ಸಂಸತ್ ಮೇಲೆ ದಾಳಿ ನಡೆದಿದ್ದು ಕೇಂದ್ರದ ಮೋದಿ ಸರಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಮೋದಿ ಹಾಗೂ ಅಮಿತ್ ಶಾ ರವರು ನಮ್ಮ ದೇಶದ ಭದ್ರತೆಯ ಬಗ್ಗೆ ಕಾಳಜಿ ವಹಿಸದೆ ಕೇವಲ ಕಾಂಗ್ರೆಸ್ ಪಕ್ಷ ಹಾಗೂ ವಿರೋಧಪಕ್ಷಗಳ ವಿರುದ್ಧ ಆಪಾದನೆಯನ್ನು ಮಾಡುವುದರಲ್ಲಿ ಕಾಲಹರಣವನ್ನು ಮಾಡುತ್ತಿದ್ದು ವಿರೋಧ ಪಕ್ಷದ ಸಂಸದರ ಸದಸ್ಯತ್ವವನ್ನು ಕಿತ್ತುಕೊಳ್ಳಲು ಯತ್ನಿಸುವ ಪ್ರಯತ್ನವನ್ನು ಮಾಡುತ್ತಾ ತಮ್ಮ ವಿರೋಧ ಪಕ್ಷಗಳ ನಾಯಕರುಗಳ ಮನೆಗಳಿಗೆ ಐಟಿ ಹಾಗೂ ಈ ಡಿ ದಾಳಿಗಳನ್ನು ನಡೆಸುವಲ್ಲಿ ಕಾರ್ಯಪ್ರವೃತ್ತದ್ದಲ್ಲಿ ಮಗ್ನವಾಗಿದೆ.
ನಮ್ಮ ದೇಶದ ಬಗ್ಗೆ ಜನಸಾಮಾನ್ಯರ ಬಗ್ಗೆ ಯಾವುದೇ ಕಾಳಜಿ ಇಲ್ಲದೆ ಸುಳ್ಳು ಸುಳ್ಳು ಹೇಳಿಕೆಯನ್ನು ನೀಡುತ್ತಾ ಜನರನ್ನು ಮೋಸಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ನಿಜವಾಗಿಯೂ ಇವರಿಗೆ ನಮ್ಮ ದೇಶದ ಜನಸಾಮಾನ್ಯರ ಬಗ್ಗೆ ದೇಶದ ಬಗ್ಗೆ ಕಾಳಜಿ ಇದ್ದಿದ್ದರೆ ಇಂದು ನಮ್ಮ ದೇಶಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಬಿಜೆಪಿ ಸಂಸತ್ ಸದಸ್ಯರ ಕಚೇರಿಯಿಂದಲೇ ಇವರಿಗೆ ಸಂಸತ್ ಪ್ರವೇಶಿಸಲು ಪಾಸ್ ಸಿಕ್ಕಿದ್ದು ಸಂಸದ ಪ್ರತಾಪ್ ಸಿಂಹ ರವರನ್ನು ಈ ಕೂಡಲೇ ವಿಚಾರಣೆ ನಡೆಸಬೇಕು.
ಬಿಜೆಪಿ ಕೇಂದ್ರದ ನಾಯಕರು ಇನ್ನು ಮುಂದೆಯಾದರೂ ಕಾಂಗ್ರೆಸ್ಸಿಗರನ್ನು ದೋಷಿಸುವುದನ್ನು ಬಿಟ್ಟು ದೇಶದ ಭದ್ರತೆಯ ಬಗ್ಗೆ ಗಮನಹರಿಸುವುದು ಉತ್ತಮ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ತಮ್ಮ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.