ನನ್ನ ಮಗ ಪ್ರಧಾನಿ ಮೋದಿ ಅಭಿಮಾನಿ: ಸಂಸತ್ಗೆ ನುಗ್ಗಿದ ಮನೋರಂಜನ್ ತಂದೆ ಹೇಳಿಕೆ
ಮೈಸೂರು: ಸಂಸತ್ತಿನಲ್ಲಿ ಬುಧವಾರ ನಡೆದ ದಾಳಿ ಪ್ರಕರಣದಲ್ಲಿ ಬಂಧಿತನಾಗಿರುವ ಮೈಸೂರು ಮೂಲದ ಮನೋರಂಜನ್ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಯಾಗಿದ್ದ ಎಂದು ಆತನ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಮ್ಮ ದೇವರು. ಅವರ ಬಗ್ಗೆ ನನ್ನ ಮಗನಿಗೆ ಅತೀವ ಅಭಿಮಾನ ಇತ್ತು. ಮೋದಿ ನಮಗೆ ಪ್ರಧಾನಿಯಾಗಿ ಸಿಕ್ಕಿರುವುದು ನಮ್ಮ ಅದೃಷ್ಟ ಎಂದು ಮನೋರಂಜನ್ ಹೇಳುತ್ತಿದ್ದ ಎಂದು ಆತನ ತಂದೆ ದೇವರಾಜೇಗೌಡ ಅವರು ಹೇಳಿದ್ದಾರೆ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಮಲ್ಲಾಪುರ ಗ್ರಾಮ ಮೂಲದ ಮನೋರಂಜನ್ ಕುಟುಂಬ ಪ್ರಸ್ತುತ ಮೈಸೂರಿನ ವಿಜಯನಗರದಲ್ಲಿ ನೆಲೆಸಿದ್ದು, ತಂದೆ ಕೃಷಿ ಕಾರ್ಯ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ನನ್ನ ತಂದೆ, ಅಜ್ಜ ಎಲ್ಲಾ ರಾಜಕೀಯ ಮಾಡಿ ಏನೂ ಇಲ್ಲದಂತೆ ಆಗಿದ್ದಾರೆ. ಹಾಗಾಗಿ, ತೋಟದಲ್ಲಿ ಕೆಲಸ ಮಾಡ್ಕೊಂಡಿರು ಎಂದು ನಾನು ಹೇಳುತ್ತಿದ್ದೆ ಎಂದು ದೇವರಾಜೇಗೌಡ ಹೇಳಿದ್ದಾರೆ.