ಉಡುಪಿ ರೀಜನ್‌ಗೆ ಸ್ಟೇಟ್ ಬ್ಯಾಂಕ್ ಡಿ.ಜಿ.ಎಮ್ ಟ್ರೋಫಿ
ಉಡುಪಿ: ಇತ್ತೀಚೆಗೆ ಮಂಗಳೂರಿನ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ಆಡಳಿತ ಕಛೇರಿ – 6 ವತಿಯಿಂದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಮಂಗಳೂರು, ಮಡಿಕೇರಿ, ಉಡುಪಿಯನ್ನೊಳಗೊಂಡ ಆರು ಪ್ರಾದೇಶಿಕ ಕಛೇರಿಗಳ ಎಂಟು ತಂಡಗಳ ನಡುವೆ ಡೆಪ್ಯುಟಿ ಜನರಲ್ ಮ್ಯಾನೇಜರ್ ಕಪ್ ಕ್ರಿಕೆಟ್ ಪಂದ್ಯಾಕೂಟ ನಡೆಯಿತು.
ಪಂದ್ಯಾಕೂಟವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಜನರಲ್ ಮ್ಯಾನೇಜರ್ ಜೋಬಿ ಜೋಸ್ ಉಧ್ಘಾಟಿಸಿದರು. ಲೀಗ್ ಮಾದರಿಯಲ್ಲಿ ನಡೆದ ಪಂಧ್ಯಾಕೂಟದ ಪೈನಲ್ ಪಂದ್ಯದಲ್ಲಿ ದೀಪ ರಾಜ್ ಹೆಗ್ಡೆ ನೇತೃತ್ವದ ಉಡುಪಿ ರೀಜನಲ್ ಆಫೀಸ್ ತಂಡವು ಮೊದಲು ಬ್ಯಾಟಿಂಗ್ ನಡೆಸಿ 47 ರನ್ನು ಗಳಿಸಿತು. ಇದಕ್ಕುತ್ತರವಾಗಿ 48 ರನ್ನುಗಳ ಗುರಿಯನ್ನು ಬೆನ್ನುಹತ್ತಿದ ಬಲಿಷ್ಠ ಹಾಸನ ತಂಡವು ನಿಗದಿತ 6 ಓವರುಗಳಲ್ಲಿ ಕೇವಲ 39 ರನ್ನು ಗಳನ್ನು ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಫೈನಲ್ ಪಂದ್ಯ ಗೆದ್ದ ಉಡುಪಿ ರೀಜನಲ್ ಆಫೀಸ್ ತಂಡಕ್ಕೆ ಡಿ.ಜಿ.ಎಮ್.ಜೋಬಿ ಜೋಸ್ ಟ್ರೋಫಿ ವಿತರಿಸಿದರು.