ಉಡುಪಿ: ಅಂದರ್- ಬಾಹರ್ ಹತ್ತು ಮಂದಿಯ ಬಂಧನ
ಉಡುಪಿ: ಕರಾವಳಿ ಜಂಕ್ಷನ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿಯ ಶಾರದಾ ಇಂಟರ್ ನ್ಯಾಷನಲ್ ಹೊಟೇಲ್ ಹಿಂಬದಿಯ ಗದ್ದೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಅಂದರ್-ಬಾಹರ್ ಎಂಬ ಇಸ್ಪೀಟ್ ಜುಗಾರಿ ಆಡುತ್ತಿದ್ದ ಮಾಹಿತಿಯಂತೆ ಸೆನ್ ಪೊಲೀಸರು ದಾಳಿ ನಡೆಸಿ ಹತ್ತು ಮಂದಿಯನ್ನು ಬಂಧಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಮಾಹಿತಿ ಪಡೆದ ಪೊಲೀಸರು ನ್ಯಾಯಲಯದ ಆದೇಶದ ಪಡೆದು ರಾತ್ರಿ 7.30 ಗಂಟೆಗೆ ದಾಳಿ ನಡೆಸಿದ್ದಾರೆ. ಶ್ರೀ ರಾಜ್, (31) ಕುಂದಾಪುರ, ಕಿರಣ್ (30) ಪಡುಮುಂಡು, ಕುಂದಾಪುರ, ಗಣೇಶ್ (30) ಪಡುಮುಂಡು, 4) ಸುಧಾಕರ (42) ಬ್ರಹ್ಮಾವರ, ಸತೀಶ್ (45)ಬ್ರಹ್ಮಾವರ, ಕಾರ್ತಿಕ್ (31) ಬ್ರಹ್ಮಾವರ, ಗಣೇಶ್ (40) ಸಾಸ್ತಾನ, ಗಣೇಶ್ (39) ಕಕ್ಕುಂಜೆ, ರಾಜೇಶ್ (40) ಬ್ರಹ್ಮಾವರ, ಮಹೇಶ್ ಹಾವಂಜೆ, ಇವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ರೂ. 78,520, ಇಸ್ಪೀಟ್ ಕಾರ್ಡ್, ಟಾರ್ಪಲ್-1, ಅರ್ಧ ಉಳಿದ ಕ್ಯಾಂಡಲ್-2 ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಆಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.