ಸುಪ್ರೀಂ ಕೋರ್ಟ್ ತೀರ್ಪು ಲೋಕಸಭಾ ಚುನಾವಣೆಗೆ ಬಲು ದೊಡ್ಡ ಅಸ್ತ್ರ- ಕೆ. ಉದಯ್ ಕುಮಾರ್
ಉಡುಪಿ: ಜಮ್ಮು -ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಆರ್ಟಿಕಲ್ 370 ರದ್ದು ಮಾಡಿದ ಕೇಂದ್ರ ಸರಕಾರದ ನಿರ್ಧಾರ ಸರಿ ಇದೆ ಎಂದು ಸುಪ್ರೀಂಕೋರ್ಟ್ ಪಂಚ ಸದಸ್ಯ ಪೀಠ ಒಮ್ಮತದ ತೀರ್ಪು ನೀಡಿರುವುದು ಸಂತಸ ತಂದಿದೆ.
ಆ ಮೂಲಕ ಇಡೀ ದೇಶ ಒಂದು ಎಂಬ ಮೋದಿಯವರ ಪರಿಕಲ್ಪನೆಗೆ ಸುಪ್ರೀಂ ಕೋರ್ಟ್ ಅಧಿಕೃತ ಮುದ್ರೆ ಒತ್ತಿದೆ. ಈ ಐತಿಹಾಸಿಕ ನಿರ್ಣಯ ಬಿಜೆಪಿ ಪಾಲಿಗೆ ಮುಂದಿನ ಲೋಕಸಭಾ ಚುನಾವಣೆಗೆ ಬಲು ದೊಡ್ಡ ಅಸ್ತ್ರವಾಗಲಿದೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ್ ಕುಮಾರ್ ಶೆಟ್ಟಿ ಹೇಳಿದ್ದಾರೆ.