ಮದುವೆ ಸಮಾರಂಭದಿಂದ ಹಿಂದಿರುಗುತ್ತಿದ್ದ ಕಾರು ಟ್ರಕ್‌ಗೆ ಡಿಕ್ಕಿ- ಎಂಟು ಮಂದಿ ಸಜೀವ ದಹನ!
ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ಕಾರೊಂದು ಟ್ರಕ್ ಗೆ ಡಿಕ್ಕಿ ಹೊಡೆದು ಒಂದು ಮಗು ಸೇರಿದಂತೆ ಎಂಟು ಜನರು ಕಾರಿನಲ್ಲಿಯೇ ಸುಟ್ಟು ಕರಕಲಾದ ದುರಂತ ಘಟನೆ ಉತ್ತರ ಪ್ರದೇಶದ ಭೋಜಿಪುರ ಬಳಿಯ ಬರೇಲಿ-ನೈನಿತಾಲ್ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಅಪಘಾತದ ವೇಳೆ ಕಾರು ಸೆಂಟ್ರಲ್ ಲಾಕ್ ಆಗಿದ್ದರಿಂದ ಒಳಗಿದ್ದವರು ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸುಟ್ಟು ಕರಕಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಟೈರ್ ಸ್ಫೋಟವಾಗಿ ಹೆದ್ದಾರಿಯಲ್ಲಿ ಪಲ್ಟಿಯಾಗಿ ಬೆಂಕಿ ಹೊತ್ತಿ ಕೊಂಡಿದೆಂದು ತಿಳಿದುಬಂದಿದೆ.
ಭೋಜಿಪುರದ ಬಳಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಟ್ರಕ್ ಗೆ ಕಾರು ಡಿಕ್ಕಿ ಹೊಡೆದಿದೆ. ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕಾರು ಸೆಂಟ್ರಲ್ ಲಾಕ್ ಆಗಿದ್ದರಿಂದ ಕಾರಿನಲ್ಲಿದ್ದವರು ಬೆಂಕಿಗೆ ಆಹುತಿಯಾಗಿದ್ದಾರೆ. ಮೃತದೇಹಗಳನ್ನು ಹೊರತೆಗೆಯಲಾಗಿದೆ. ಏಳು ವಯಸ್ಕರು ಮತ್ತು ಒಂದು ಮಗು ಮೃತಪಟ್ಟಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಬರೇಲಿ ಎಸ್‌ಎಸ್‌ಪಿ ಘುಲೆ ಸುಶೀಲ್ ಚಂದ್ರಭಾನ್ ತಿಳಿಸಿದ್ದಾರೆ.