ಡಿ.16 ಪೇಜಾವರಶ್ರೀಗಳ ಷಷ್ಟ್ಯಬ್ದಿ ಅಭಿನಂದನಾ ಸಮಾರಂಭ- ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ, ಡಿ.9: ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಷಷ್ಟ್ಯಬ್ದಿ ಅಭಿನಂದನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಶನಿವಾರ ಶ್ರೀಪೇಜಾವರ ಮಠದ ರಾಮ ವಿಠಲ ಮಂಟಪದಲ್ಲಿ ಕೇಂದ್ರ ಕೃಷಿ(ರಾಜ್ಯ ಖಾತೆ) ಸಚಿವೆ ಶೋಭಾ ಕರಂದ್ಲಾಜೆ ಬಿಡುಗಡೆ ಮಾಡಿದರು.
ಡಿ.16ರಂದು ಪೇಜಾವರ ಮಠದ ಮುಂಭಾಗದಲ್ಲಿ ನಡೆಯುವ ಸಮಾರಂಭಕ್ಕೆ ನಾವೆಲ್ಲರೂ ಒಂದಾಗಿ ಕೆಲಸ ಮಾಡೋಣ ಎಂದು ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಕಾರ್ಯಕ್ರಮ ನಡೆಸುವಂತೆ ಸಂಘಟಿಸಬೇಕು ಎಂದು ಹೇಳಿದರು.
ವಿವಿಧ ಕ್ಷೇತ್ರದ ಪ್ರಮುಖರಾದ ವಿಶ್ವನಾಥ ಶೆಣೈ, ಸಂಧ್ಯಾ ರಮೇಶ್, ಸುನಿಲ್ ಕೆ ಆರ್, ಶೇಖರ್ ಶೆಟ್ಟಿ ಹಿರಿಯಡ್ಕ, ಉಮೇಶ್ ಶೆಟ್ಟಿ ಎಲ್ಲಂಪಳ್ಳಿ, ಪೃಥ್ವಿರಾಜ್ ಶೆಟ್ಡಿ, ಉಮೇಶ್ ರಾವ್ ಬಡಾನಿಡಿಯೂರು, ಶ್ರೀಶ ನಾಯಕ್ ಪೆರ್ಣಂಕಿಲ, ಸತೀಶ್ ಕುಮಾರ್, ರಾಘವೇಂದ್ರ ಕಿಣಿ, ಪ್ರಭಾಕರ ಪೂಜಾರಿ, ಹರೀಶ್ ರಾಮ್, ಅಜಿತ್,ಪದ್ಮಾ ಆರ್. ಸುಬ್ರಹ್ಮಣ್ಯ ಶೇಟ್ , ಪ್ರಭಾಕರ ಪೂಜಾರಿ, ಹೆರ್ಗ ದಿನಕರ ಶೆಟ್ಟಿ, ಕಚ್ಚೂರು ಗೋಕುಲ್ ದಾಸ್, ಚಂದ್ರಕಾಂತ್ ಕೆ ಎನ್, ಪ್ರಥ್ವಿರಾಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.