ಆತ್ರಾಡಿ: ಅಂದರ್ ಬಾಹರ್- ಇಬ್ಬರ ಬಂಧನ
ಹಿರಿಯಡ್ಕ, ಡಿ.7: ಆತ್ರಾಡಿ ಸಂತೆ ಮಾರ್ಕೆಟ್ ಬಳಿ ಡಿ.6ರಂದು ರಾತ್ರಿ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಇಬ್ಬರನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಸಚಿನ್ ಮತ್ತು ರಾಘವೇಂದ್ರ ಬಂಧಿತ ಆರೋಪಿಗಳು. ಉಳಿದ 3-4 ಜನ ಆರೋಪಿಗಳು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಬಂಧಿತರಿಂದ ಒಟ್ಟು 5,870ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.”