ಉಡುಪಿ: ಹಿರಿಯ ವೈದ್ಯಾಧಿಕಾರಿ ಡಾ.ಎಚ್ .ಎಂ ಶಶಿಕಲಾ ನಿಧನ
ಹೆಬ್ರಿ: ಖ್ಯಾತ ಸರ್ಕಾರಿ ವೈದ್ಯಾಧಿಕಾರಿಯಾಗಿದ್ದ ದಿ. ಸುರೇಂದ್ರ ಆಚಾರ್ಯ ಅವರ ಪತ್ನಿ ಹೆಬ್ರಿಯ ಡಾ.ಎಚ್ .ಎಂ. ಶಶಿಕಲಾ (61)ಅವರು ತನ್ನ ಉಡುಪಿಯ ನಿವಾಸದಲ್ಲಿ ಬುಧವಾರ ಹೃದಯಾಘಾತದಿಂದ ನಿಧನರಾದರು.
ಉಡುಪಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಅಜ್ಜರಕಾಡು ಸರ್ಕಾರಿ ಜಿಲ್ಲಾಸ್ಪತ್ರೆ ಸೇರಿದಂತೆ ಕೆಲವು ಕಡೆಯಲ್ಲಿ ಸೇವೆ ಸಲ್ಲಿಸಿ ಜನಮೆಚ್ಚುಗೆ ಪಡೆದಿದ್ದರು. ಸಮಾಜಕ್ಕೆ ವಿವಿಧ ಕೊಡುಗೆ ನೀಡಿದ್ದರು. ಮೃತರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.