ಕರ್ನಾಟಕದ ಮೊದಲ ಕೋವಿಡ್ ಮುಕ್ತ ಜಿಲ್ಲೆ ಎಂದು ಬೀದರ್ ಘೋಷಣೆ
ಬೀದರ್: ಬೀದರ್ ಕೋವಿಡ್ ಮುಕ್ತ ಮೊದಲ ಜಿಲ್ಲೆ ಎಂದು ಘೋಷಣೆ ಮಾಡಲಾಗಿದೆ. ಸೆ. 2 ರಂದು ಯಾವುದೇ ಕೊರೋನಾ ಕೇಸ್ ದಾಖಲಾಗಿಲ್ಲ.
ಸೋಂಕು ತಗುಲಿದ್ದ ರೋಗಿಗಳು ಮತ್ತು ಹೋಮ್ ಕ್ವಾರಂಟೈನ್ ನಲ್ಲಿದ್ದವರು ಚೇತರಿಸಿಕೊಂಡಿದ್ದಾರೆ, ಬೀದರ್ ಶೂನ್ಯ ಪ್ರಕರಣಗಳನ್ನು ದಾಖಲಿಸಿಕೊಂಡಿದೆ.
ಕೋವಿಡ್‌ನ ಮೊದಲ ಮತ್ತು 2ನೇ ಅಲೆಗಳ ಸಮಯದಲ್ಲಿ, ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಬೀದರ್ ಜಿಲ್ಲೆಯು ಆತಂಕಕ್ಕೆ ಕಾರಣವಾಗಿತ್ತು. ಆದರೆ ಕಳೆದ ಒಂದು ತಿಂಗಳಲ್ಲಿ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ.
ಕಳೆದ ಎರಡು ಕೋವಿಡ್ ಅಲೆಗಳಲ್ಲಿ ಜಿಲ್ಲೆಯಲ್ಲಿ 24,300 ಪಾಸಿಟಿವ್ ಪ್ರಕರಣಗಳು ದಾಖಲಾಗಿತ್ತು. ಸೋಂಕು ತಗುಲಿದ್ದ 23,898 ಜನರು ಚೇತರಿಸಿಕೊಂಡಿದ್ದು 398 ಜನರು ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ, 18 ವರ್ಷಕ್ಕಿಂತ ಮೇಲ್ಪಟ್ಟ 7,54,223 ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಬಹುಶಃ ಹೆಚ್ಚಿನ ಜನರು ಲಸಿಕೆ ಪಡೆದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಜನರು ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಿದ್ದಾರೆ, ಇದು ಜಿಲ್ಲೆಯು ಕೋವಿಡ್ ಮುಕ್ತವಾಗಲು ಕಾರಣವಾಗಿರಬಹುದು ಎಂದು ಹೇಳಲಾಗಿದೆ.