ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ: ಜಿಲ್ಲಾಧ್ಯಕ್ಷರಾಗಿ ರಮೇಶ್ ಆಚಾರ್ಯ ಆಯ್ಕೆ
ಉಡುಪಿ : ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಉಡುಪಿ ಜಿಲ್ಲಾಧ್ಯಕ್ಷರಾಗಿ ಕುಂದಾಪುರದ ನೇರಂಬಳ್ಳಿ ರಮೇಶ್ ಆಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಮಹಾಸಭಾದ ಕರಾವಳಿ ಜಿಲ್ಲೆಗಳ ಉಸ್ತುವಾರಿಯಾಗಿರುವ ಮಾಧ್ಯಮ ವಕ್ತಾರ ಮಾರುತಿ ಬಡಿಗೇರ್ ರಾಯಚೂರು ಅವರ ಶಿಫಾರಸ್ಸಿನಂತೆ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರು ಬುಧವಾರ ನೇಮಕ ಮಾಡಿದ್ದಾರೆ.
ಉದ್ಯಮಿಯಾಗಿರುವ ರಮೇಶ ಆಚಾರ್ಯ ಸಮಾಜಸೇವಕರಾಗಿ ಸಕ್ರೀಯರಾಗಿ ಬೀಜಾಡಿಗೋಪಾಡಿ ಮಿತ್ರ ಸಂಘಮದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.