ಸುವರ್ಣ ತ್ರಿಭುಜ ಅವಘಡ ಪ್ರಕರಣ- ಸತ್ಯ ಮರೆ ಮಾಚುವ ಯತ್ನ: ಫೆಡರೇಶನ್ ಆರೋಪ

ಮಲ್ಪೆ: ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ಕಣ್ಮರೆಯಾಗಿರುವ ಸುವರ್ಣ ತ್ರಿಭುಜ ಬೋಟ್ ಬಗ್ಗೆ ಸತ್ಯಾಂಶ ಮರೆ ಮಾಚಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರ್ಕೆಟಿಂಗ್ ಫೆಡರೇಶನ್‍ನ ಅಧ್ಯಕ್ಷ ಗಣಪತಿ ಮಾಂಗ್ರೆ ಈ ಆರೋಪ ಮಾಡಿದ್ದಾರೆ.

ಅವಘಡದಲ್ಲಿ ಏಳು ಮಂದಿ ಮೀನುಗಾರರು ಕಣ್ಮರೆಯಾಗಿದ್ದಾರೆ. ಸುವರ್ಣ ತ್ರಿಭುಜ ಬೋಟ್ ಅವಘಡದಲ್ಲಿ ನೌಕಾಪಡೆಯನ್ನು ರಕ್ಷಿಸಲು ಸತ್ಯಾಂಶ ಮರೆಮಾಚಲಾಗುತ್ತಿದ್ದು, ಅಧಿಕಾರಿಗಳು ನಿಜ ಹೇಳಲು ಮುಂದಾದ ಬಳಿಕವೂ ಹಿಂದೇಟು ಹಾಕಿದ್ದಾರೆ. ಈ ಅವಘದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನ್ಯಾಯ ಎಸಗಿವೆ ಎಂಬ ಆರೋಪ ವ್ಯಕ್ತಪಡಿಸಿದ್ದಾರೆ.

ಸುವರ್ಣ ತ್ರಿಭುಜ ಬೋಟ್ ಅವಘಡಕ್ಕೆ ಯಾರು ಕಾರಣ ಏನ್ನುವುದು ಗೊತ್ತಿದೆ. ಆದರೆ, ಅವಘಡ ಮಾಡಿರುವ ತಪ್ಪನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. 7 ಮೀನುಗಾರರನ್ನು ರಕ್ಷಿಸಲು ಶಕ್ತರಾಗದವರಿಂದ, ದೇಶ ರಕ್ಷಣೆಗೆ ಸಾಧ್ಯವೇ ಎನ್ನುವ ಪ್ರಶ್ನೆ ಕಾಡುವುದು ಸಹಜ. ಈ ಕಾರಣಕ್ಕೆ ಸತ್ಯ ಮರೆ ಮಾಚಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!