ಕಡೆಕಾರು: ಸೋಲಾರ್ ದೀಪ ಉದ್ಘಾಟನೆ
ಉಡುಪಿ: ಯಶೋದ ಆಟೋ ಚಾಲಕರ ಮತ್ತು ಮಾಲಕರ ಸಂಘ ಉಡುಪಿ ವತಿಯಿಂದ ಸೋಲಾರ್ ದೀಪ ಉದ್ಘಾಟನೆ ಸಮಾರಂಭ.
ಯಶೋದ ಆಟೋ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಜಿಲ್ಲಾಧ್ಯಕ್ಷರಾದ ಕೆ.ಕೃಷ್ಣಮೂರ್ತಿ ಆಚಾರ್ಯ ನೇತೃತ್ವದಲ್ಲಿ ಕುತ್ಪಾಡಿ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘಕ್ಕೆ ಸೋಲಾರ್ ದೀಪ ಕೊಡುಗೆ ನೀಡಲಾಯಿತು.
ಜಿಲ್ಲಾಧ್ಯಕ್ಷರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಅವರು ಸೋಲಾರ್ ದೀಪವನ್ನು ಬೆಳಗುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಡೆಕಾರು ಗ್ರಾಮ ಪಂಚಾಯತ್ ನ ಅಧ್ಯಕ್ಷರು ಜಯಕರ್ ಸೇರಿಗಾರ್, ಉಪಾಧ್ಯಕ್ಷ ನವೀನ್ ಶೆಟ್ಟಿ, ಮಾಜಿ ಪಂಚಾಯತ್ ಅಧ್ಯಕ್ಷ ರಘುನಾಥ್ ಕೋಟ್ಯಾನ್, ಪಂಚಾಯತ್ ಸದಸ್ಯೆ ಸವಿತಾ ಹಾಗೂ ಯಶೋಧ ಆಟೋಯೂನಿಯನ್ ತಾಲೂಕು ಅಧ್ಯಕ್ಷ ದಿವಾಕರ್ ಪೂಜಾರಿ ಕುತ್ಪಾಡಿ ಆಟೋ ನಿಲ್ದಾಣದ ಅಧ್ಯಕ್ಷರು ಕೃಷ್ಣ ಸನಿಲ್ ಹಾಗೂ ಯಶೋಧ ಆಟೋ ಯೂನಿಯನ್ ಪದಾಧಿಕಾರಿಗಳಾದ ಸುನಿಲ್ ಬೈಲಕೆರೆ ಗಣೇಶ್ ಸುವರ್ಣ, ಪ್ರವೀಣ್ ಕುಂಜಿಬೆಟ್ಟು, ಹರೀಶ್ ಅಮೀನ್, ಅನಿಲ್ ಉಪಸ್ಥಿತಿದ್ದರು.