ಕೋಟ: ಬ್ಯಾಂಕಿನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 13 ಲಕ್ಷ ರೂ. ವಂಚನೆ
ಕೋಟ: ಬ್ಯಾಂಕಿನಲ್ಲಿ ಕೆಲಸ ಮಾಡಿಸಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲಸ ಹುಡುಕುತ್ತಿದ್ದ ಕಿರಿಮಂಜೇಶ್ವರ ಗ್ರಾಮದ ಮಹೇಶ್ ಕುಮಾರ್(35) ಎಂಬವರಿಗೆ 2021ರಲ್ಲಿ ಅವರ ತಂಗಿ ಶೈಲಶ್ರೀ ಅವರಿಂದ ವಡ್ಡರ್ಸೆ ನಿವಾಸಿ ಆರೋಪಿ ಅಜಿತ್ ಕುಮಾರ್ ಎಂಬಾತನ ಪರಿಚಯವಾಗಿತ್ತು. ಆತನು ತನಗೆ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯವಿದ್ದು, ಬ್ಯಾಂಕಿನಲ್ಲಿ ಕೆಲಸ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದನು.
ಅದನ್ನು ನಂಬಿದ ಮಹೇಶ್ ಕುಮಾರ್, ಆರೋಪಿ ಹೇಳಿದಂತೆ ಒಟ್ಟು 13 ಲಕ್ಷ ರೂ. ಹಣವನ್ನು ಹಂತ ಹಂತವಾಗಿ ಬ್ಯಾಂಕ್ ಖಾತೆಗೆ ಕಳುಹಿಸಿದ್ದರು. ಆದರೆ ಆತ ಈ ಹಣವನ್ನು ಪಡೆದು ದುರುಪಯೋಗಪಡಿಸಿ ಕೊಂಡು ವಂಚಿಸಿರುವುದಾಗಿ ದೂರಲಾಗಿದೆ.