ಬ್ರಹ್ಮಾವರ: ಬೈಕ್‌ಗೆ ಬಸ್ – ಸವಾರ ಸ್ಥಳದಲ್ಲೇ ಮೃತ್ಯು
A motorcyclist named Preetam Antony D’Silva (30) sadly died after being hit by a bus near the Brahmavar Belooru Cross on Highway 66. The incident, which occurred in the afternoon, saw the private bus drag D’Silva and his motorcycle resulting in severe injuries. He died en route to the Brahmavar Community Health Centre.
ಬ್ರಹ್ಮಾವರ, ನ.29: ಬಸ್ಸೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಬ್ರಹ್ಮಾವರ ಬೇಳೂರುಜೆಡ್ಡು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಪ್ರೀತಮ್ ಅಂತೋನಿ ಡಿಸಿಲ್ವ (30) ಎಂದು ಗುರುತಿಸಲಾಗಿದೆ.
ಕುಂದಾಪುರದಿಂದ ಬ್ರಹ್ಮಾವರ ಕಡೆಗೆ ಹೋಗುತ್ತಿದ್ದ ಬೈಕಿಗೆ ಹಿಂದಿನಿಂದ ಬಂದ ಖಾಸಗಿ ಬಸ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಬಸ್ಸಿನಡಿಗೆ ಬೈಕ್ ಸಮೇತ ಬಿದ್ದ ಪ್ರೀತಮ್‌ನನ್ನು ಬಸ್ ಎಳೆದುಕೊಂಡು ಹೋಗಿದೆ ಎನ್ನಲಾಗಿದೆ. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದು ಬಂದಿದೆ.