ನಕಲಿ ಮೂರ್ತಿಯ ಸೃಷ್ಟಿಕರ್ತರಿಗೆ ನಿಷ್ಠಾವಂತ IPS ಪ್ರಶ್ನಿಸುವ ಅಧಿಕಾರ ನೀಡಿದವರು ಯಾರು – ಸುರೇಶ್ ಶೆಟ್ಟಿ
ಉಡುಪಿ: ಇಡೀ ಭಾರತ ದೇಶದಲ್ಲಿ ಉಡುಪಿ ಜಿಲ್ಲೆಯ ಜನಸಾಮಾನ್ಯರು ತಲೆತಗ್ಗಿಸುವಂತಹ ಕೆಲಸವನ್ನು ಮಾಡಿದಿದ್ದರೆ ಅದು ಕಾರ್ಕಳದ ಶಾಸಕ ಸುನಿಲ್ ಕುಮಾರ್ ಮಾತ್ರ. ನಕಲಿ ಪರಶುರಾಮ ಮೂರ್ತಿಯನ್ನು ಸೃಷ್ಟಿಸಿ ಇಡೀ ದೇಶದ ಜನರಿಗೆ ತುಳು ನಾಡಿನ ಸೃಷ್ಟಿಕರ್ತನಿಗೆ ಮೋಸವನ್ನು ಮಾಡಿದಂತಹ ಹಾಗೂ ಸಿಮೆಂಟ್ ಹಗರಣದಲ್ಲಿ ಭಾಗಿಯಾದ
ಸುನಿಲ್ ಕುಮಾರ್ ರವರಿಗೆ ನಮ್ಮ ಉಡುಪಿಯ ಐಪಿಎಸ್ ಅಧಿಕಾರಿ ಡಾ.ಅರುಣ್ ಕುಮಾರ್ ಅವರನ್ನು ಪ್ರಶ್ನಿಸುವ ಅಧಿಕಾರವನ್ನು ನೀಡಿದವರು ಯಾರು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಸುರೇಶ್ ಶೆಟ್ಟಿ ಬನ್ನಂಜೆ ಪ್ರಶ್ನಿಸಿದ್ದಾರೆ.
ಕಾರ್ಕಳದ ಎರ್ಲಾಪಾಡಿಯ ಉಮಿಕಲ್ ಬೆಟ್ಟದಲ್ಲಿ ನಕಲಿ ಪರಶುರಾಮ ಮೂರ್ತಿಯ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತನಿಖೆಗೆ ಆದೇಶಿಸಿದ್ದು, ತಮ್ಮ ಬಂಧನದ ಭೀತಿಯಿಂದ ಉಡುಪಿ ಎಸ್ ಪಿ ಅವರನ್ನು ಪ್ರಶ್ನಿಸಿ ತಾನು ಸಾಚಾ ಎಂಬುದನ್ನು ಬಿಂಬಿಸಲು ಯತ್ನಿಸುತ್ತಿದ್ದಾರೆ. ಇದೀಗ ಉಡುಪಿಯಲ್ಲಿ ನಡೆಸುತ್ತಿರುವ ನಡೆಯುತ್ತಿರುವ ಅನೇಕ ನಕಲಿ ದಂಧೆಗಳಿಗೆ ಈ ಬಿಜೆಪಿಯವರ ಕೃಪಾ ಕಟಾಕ್ಷ ಇದ್ದು ಅದನ್ನು ತಡೆಯಲು ಯತ್ನಿಸುತ್ತಿರುವ ಒಬ್ಬ ನಿಷ್ಠಾವಂತ ನಿಷ್ಕಳಂಕ ಉಡುಪಿಯ ಎಸ್ ಪಿ ಡಾಕ್ಟರ್ ಅರುಣ್ ಕುಮಾರ್ ಇವರನ್ನು ಪ್ರಶ್ನಿಸಲು ತಾವು ಯಾರು. ಇದೆಲ್ಲ ನಿಮ್ಮ ಬಿಜೆಪಿ ಸರಕಾರದ ಆಡಳಿತದಲ್ಲಿ ನಡೆದಿರ ಬಹುದು ಇದಕ್ಕೆ ಕಾಂಗ್ರೆಸ್ ಪಕ್ಷವಾಗಲಿ ಕಾಂಗ್ರೆಸ್ ಪಕ್ಷದ ನಾಯಕರಾಗಲಿ, ಪಕ್ಷದ ಕಾರ್ಯಕರ್ತರಾಗಲಿ ಬೆಂಬಲಿಸುವುದಿಲ್ಲ. ಒಬ್ಬ ನಿಷ್ಠಾವಂತ ಜಿಲ್ಲೆಯ ಪೊಲೀಸ್ ಅಧಿಕಾರಿಯ ಜೊತೆ ಇಡೀ ಉಡುಪಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದಾರೆವೆಂಬುದು ನಿಮಗೆ ತಿಳಿದಿರಲಿ ಎಂದು ಬನ್ನಂಜೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.