ಕೋಟ: ಕೋಳಿ ಅಂಕಕ್ಕೆ ದಾಳಿ- ನಾಲ್ವರ ಬಂಧನ
ಕೋಟ : ಮೊಳಹಳ್ಳಿ ಗ್ರಾಮದ ಬೆಟ್ಟೇರಿ ಎಂಬಲ್ಲಿ ನ. 22 ರಂದು ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಬೆಟ್ಟೇರಿಯ ಮಹೇಶ್ (34), ಕೋಣಿಹಾರದ ಗಣೇಶ್ (33), ಕೊರ್ಗಿಯ ಶಂಕರ (50), ಹಂದಾಡಿಯ ಶರತ್(47) ಬಂಧಿತ ಆರೋಪಿಗಳು. ಇವರಿಂದ 2000 ರೂ. ನಗದು, ಕೋಳಿ ಅಂಕಕ್ಕೆ ಬಳಸಿದ 5 ಕೋಳಿ, 5 ಕೋಳಿ ಬಾಳ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.