ಪಡುಬಿದ್ರಿ: ಕೋಳಿ ಅಂಕಕ್ಕೆ ದಾಳಿ- ಮೂವರು ವಶಕ್ಕೆ
ಪಡುಬಿದ್ರಿ: ಕೋಳಿ ಅಂಕಕ್ಕೆ ದಾಳಿ ಮಾಡಿರುವ ಪೊಲೀಸರು ಮೂವರನ್ನು ವಶಕ್ಕೆ ಪಡೆದಿರುವ ಘಟನೆ ಇಲ್ಲಿಗೆ ಸಮೀಪದ ಪೆರಿಯಕಲ ಎಂಬಲ್ಲಿ ನ.20ರಂದು ನಡೆದಿದೆ.
ಕೋಳಿ ಅಂಕ ನಡೆಸುತ್ತಿದ್ದ ಸುರೇಶ್, ಸುಕೇಶ್, ನಾಗೇಶ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಈ ವೇಳೆ ಕೆಲವರು ಅಲ್ಲಿಂದ ಓಡಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳಿಂದ 1110 ರೂ. ನಗದು, ಏಳು ಜೀವಂತ ಕೋಳಿಗಳು, ಎರಡು ಬಾಳುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.