ಯುವಕರ ಹಠಾತ್ ಸಾವಿಗೆ ಕೋವಿಡ್ ಲಸಿಕೆ ಕಾರಣವಲ್ಲ… ಐಸಿಎಂಆರ್ ವರದಿ

ನವದೆಹಲಿ: ಯುವಜನರಲ್ಲಿ ಹಠಾತ್ ಸಾವಿನ ಹೆಚ್ಚಳಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅಧ್ಯಯನ ಹೇಳಿದೆ.

ಮಾತ್ರವಲ್ಲದೆ, ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆಯನ್ನು ಪಡೆದವರು ಅಂತಹ ಅಪಾಯದಿಂದ ಪಾರಾಗುವುದು ಹೆಚ್ಚು ಎಂದು ಅಧ್ಯಯನ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತ ದಿಂದ ಸಾವನ್ನಪ್ಪುವ ಪ್ರಕರಣ ಹೆಚ್ಚಾಗಿದ್ದು, ಕೋವಿಡ್ ಲಸಿಕೆ ಸ್ವೀಕಾರದಿಂದಾಗಿ ಯುವಜನರಲ್ಲಿ ಸಾವಿನ ಪ್ರಮಾಣ ಹೆಚ್ಚುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕ ರಲ್ಲಿ ಹೆಚ್ಚುತ್ತಿರುವಾಗಲೇ ICMR ನ ಅಧ್ಯಯನ ವರದಿ ಹೊರಬಿದ್ದಿರುವುದು ಗಮನಾರ್ಹ. ಅಷ್ಟುಮಾತ್ರವಲ್ಲದೆ ಜನರ ಜೀವನಶೈಲಿಯಲ್ಲಿನ ಬದಲಾವಣೆಯೇ ಇದಕ್ಕೆ ಪ್ರಮುಖ ಕಾರಣ ಎಂದು ಅಧ್ಯಯನವು ಒತ್ತಿಹೇಳಿದೆ.

ಈ ಅಧ್ಯಯನವು ಅಕ್ಟೋಬರ್ 1, 2021 ರಿಂದ ಮಾರ್ಚ್ 31, 2023 ರವರೆಗೆ ದೇಶದ 47 ಆಸ್ಪತ್ರೆಗಳ ಮೇಲೆ ಕೇಂದ್ರೀಕರಿಸಿದೆ. ಜೊತೆಗೆ ಈ ಅಧ್ಯಯನವು 18 – 45 ವರ್ಷ ವಯಸ್ಸಿನ ಜನರನ್ನು ಒಳಗೊಂಡಿದೆ ಎಂದು ಹೇಳಲಾಗಿದ್ದು ಇಲ್ಲಿ ವ್ಯಕ್ತಿಗಳು ಯಾವುದೇ ಕಾಯಿಲೆಯಿಂದ ಬಳಲದೆ ಹಠಾತ್ ಸಾವನ್ನಪ್ಪಿರುವು ದು ಬೆಳಕಿಗೆ ಬಂದಿದ್ದು. ಅಂತಹ 729 ಪ್ರಕರಣಗಳನ್ನು ತಂಡವು ಅಧ್ಯಯನ ಮಾಡಿದೆ.

ಅಧ್ಯಯನದ ಬಳಿಕ ಎರಡು ಡೋಸ್ ಕೋವಿಡ್ ಲಸಿಕೆಯನ್ನು ಪಡೆದವರು ಹಠಾತ್ ಸಾವಿನ ಅಪಾಯವನ್ನು ಕಡಿಮೆ ಹೊಂದಿರುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ. ಜೊತೆಗೆ ಒಂದೇ ಡೋಸ್ ತೆಗೆದುಕೊಂಡವರು ಕೂಡಾ ಕಡಿಮೆ ಅಪಾಯದ ಮಟ್ಟವನ್ನು ಹೊಂದಿರುತ್ತಾರೆ ಎಂದು ಅಧ್ಯಯನ ಹೇಳಿದೆ.

Leave a Reply

Your email address will not be published. Required fields are marked *

error: Content is protected !!