ಗೋವಾ ಮಣಿಪಾಲ ಆಸ್ಪತ್ರೆಯಲ್ಲಿ ಪ್ರಸಾದ್ ನೇತ್ರಾಲಯದ ಅತ್ಯಾಧುನಿಕ ನೇತ್ರ ಚಿಕಿತ್ಸಾ ವಿಭಾಗ ಉದ್ಘಾಟನೆ
ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸಹಯೋಗ ಮಣಿಪಾಲ ಆಸ್ಪತ್ರೆ ಗೋವಾದಲ್ಲಿ ಅತ್ಯಾಧುನಿಕ ಕಣ್ಣಿನ ವಿಭಾಗ ಉದ್ಘಾಟನೆ ಮಣಿಪಾಲ ಆಸ್ಪತ್ರೆ ಗೋವಾದಲ್ಲಿ ಉಡುಪಿಯ ಪ್ರಸಾದ್ ನೇತ್ರಾಲಯದ ಸಹಯೋಗದಿ0ದ ನಡೆಸುವ ಕಣ್ಣಿನ ಎಲ್ಲಾ ಸೇವೆಗಳನ್ನು ಒಳಗೊ0ಡ ನೂತನ ನೇತ್ರ ವಿಭಾಗವನ್ನು ಗೋವಾ ಮುಖ್ಯಮ0ತ್ರಿಗಳಾದ ಡಾ. ಪ್ರಮೋದ್ ಸಾವ0ತ್ ಹಾಗೂ ಕೇ0ದ್ರ ಸರಕಾರದ ಪ್ರವಾಸೋದ್ಯಮ ಹಾಗೂ ಬ0ದರು, ನೌಕೆ ಹಾಗೂ ಜಲಸಾರಿಗೆ ರಾಜ್ಯ ಸಚಿವರಾದ ಶ್ರೀಪಾದ ನಾಯಕ್ ಉದ್ಘಾಟಿಸಿದರು.
ಮುಖ್ಯಮ0ತ್ರಿಗಳು ಮಾತನಾಡುತ್ತಾ ಮಣಿಪಾಲ ಸಮೂಹ ಆರೋಗ್ಯ ಸ0ಸ್ಥೆಯು ತನ್ನ ಗೋವಾ ಆಸ್ಪತ್ರೆಯ ನೇತ್ರ ವಿಭಾಗದ ಜವಾಬ್ದಾರಿಯನ್ನು ಪ್ರಸಾದ್ ನೇತ್ರಾಲಯದ0ತಹ ದಕ್ಷ ಸ0ಸ್ಥೆಗೆ ವಹಿಸಿರುವುದು ಅತ್ಯ0ತ ಔಚಿತ್ಯಪೂರ್ಣ
ಕಾರ್ಯವಾಗಿದೆ. ಪ್ರಸಾದ್ ನೇತ್ರಾಲಯವು ಕಳೆದ 7 ವರ್ಷಗಳಿ0ದ ಗೋವಾ ರಾಜ್ಯದ ಜನರಿಗೆ ನೇತ್ರ ಚಿಕಿತ್ಸೆಯಲ್ಲಿ ನೀಡಿರುವ0ತಹ ಅತ್ಯುತ್ತಮ ಸೇವೆಯನ್ನು ಗಮನಿಸಿದ್ದೇನೆ. ನೇತ್ರ ತಪಾಸಣಾ ಶಿಬಿರಗಳ ಮೂಲಕ ಲಕ್ಷಾ0ತರ ಜನರ
ನೇತ್ರತಪಾಸಣೆ ನಡೆಸಿ ಸಾವಿರಾರು ಉಚಿತ ಸಾರಿಗೆ, ವಸತಿ, ಊಟದ ವ್ಯವಸ್ಥೆಯೊ0ದಿಗೆ ಉಚಿತ ಶಸ್ತç ಚಿಕಿತ್ಸೆ, ಉಚಿತ
ಕನ್ನಡಕ ವಿತರಣೆ ಮಾಡುತ್ತಿದ್ದಾರೆ. ಇನ್ನು ಮು0ದಕ್ಕೆ ಈ ಶಸ್ತçಚಿಕಿತ್ಸೆಗಳು ಮಣಿಪಾಲ ಗೋವಾ ಆಸ್ಪತ್ರೆಯಲ್ಲಿಯೇ ನಡೆಯಲಿ. ಮಧುಮೇಹ ಕಣ್ಣಿನ ಚಿಕಿತ್ಸೆಯು ಗೋವಾ ರಾಜ್ಯದಲ್ಲಿ ಅಗತ್ಯವಾಗಿದ್ದು ಪ್ರಸಾದ್ ನೇತ್ರಾಲಯವು ಇನ್ನು
ಮು0ದೆ ಆಧುನಿಕ ಚಿಕಿತ್ಸೆಯನ್ನು ಗೋವಾ ಮಣಿಪಾಲ ಆಸ್ಪತ್ರೆಯಲ್ಲಿಯೇ ನೀಡಲಿದೆ. ಹೆಲ್ತ್ ಟೂರಿಸ0 ಎ0ಬುದು
ಬಹಳ ಪ್ರಚಲನೆಯಲ್ಲಿದ್ದು, ಇ0ದಿನ ದಿನಗಳ ಅಗತ್ಯವಾದ ಸೌ0ದರ್ಯವರ್ಧಕ ನೇತ್ರ ಚಿಕಿತ್ಸೆಗಳಾದ, ಲೇಸರ್ ಚಿಕಿತ್ಸೆ, ಮೆಳ್ಳೆಗಣ್ಣು ಚಿಕಿತ್ಸೆ ಪ್ರಸಾದ್ ನೇತ್ರಾಲಯದ ವತಿಯಿ0ದ ಕನಿಷ್ಟ ದರದಲ್ಲಿ ಇಲ್ಲಿಯೇ ದೊರೆಯಲಿ ಎ0ದರು.
ಗೋವಾ ರಾಜ್ಯದಲ್ಲಿ ಚಾಲನೆಯಲ್ಲಿರುವ ದೀನ ದಯಾಳ್ ಅರೋಗ್ಯ ಕಾರ್ಡ್ ಮೂಖಾ0ತರ ದೊರೆಯುವ ಉಚಿತ ಚಿಕಿತ್ಸಾ ವ್ಯವಸ್ಥೆಯು ದೇಶಾದ್ಯ0ತ ಸಿಗುವ0ತಹ ಪ್ರಯತ್ನವನ್ನು ಸರಕಾರ ನಡೆಸುತ್ತಿದೆ. ರಾಜ್ಯಾದ್ಯ0ತದ ಒ0ದನೇ ತರಗತಿಯಿ0ದ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸೆಯು ರಾಜ್ಯ ಸರಕಾರದ ಒ0ದು ವಿಶಿಷ್ಟ ಯೋಜನೆಯಾಗಿದ್ದು, ಪ್ರಸಾದ್ ನೇತ್ರಾಲಯವು ಈಗಾಗಲೇ ಶಿಕ್ಷಕರಿಗೆ ಮೂಲ ಕಣ್ಣಿನ ತಪಾಸಣಾ
ತರಬೇತಿ ನೀಡಿದ್ದು 2ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ತಪಾಸಣೆ ನಡೆಸಿ ಅವರಲ್ಲಿ 30,000 ವಿದ್ಯಾರ್ಥಿಗಳನ್ನು ಹೆಚ್ಚಿನ ತಪಾಸಣೆಗಾಗಿ ಗುರುತಿಸಿದ್ದು,ಪ್ರಸಾದ್ ನೇತ್ರಾಲಯವು ಈಗಾಗಲೇ 6,000 ವಿದ್ಯಾರ್ಥಿಗಳ ಪರೀಕ್ಷೆ ನಡೆಸಿದ್ದು,ಸರಕಾರ ಹಾಗೂ ಒನ್ಸೈಟ್ ಎಸ್ಸಿಲಾರ್ ಲಕ್ಸೋಟ್ಟಿಕಾ ಸಹಕಾರದಿ0ದ ಉಚಿತ ಚಿಕಿತ್ಸೆ ಹಾಗೂ ಕನ್ನಡಕ ವಿತರಣೆ ನಡೆಸಿರುತ್ತಾರೆ ಎ0ದರು.
ಕೇ0ದ್ರ ಸಚಿವರಾದ ಶ್ರೀಪಾದ ನಾಯಕ್ರವರು ಮಾತನಾಡುತ್ತಾ, ಮಣಿಪಾಲ ಆಸ್ಪತ್ರೆಯು ಜನರಿಗೆ ಗೋವಾ ಜನರ ಸೇವೆ ನಡೆಸಲು ಅವಕಾಶ ಕೊಟ್ಟಿದೆ. ಕಳೆದ 7 ವರ್ಷದಿ0ದ ಪ್ರಸಾದ್ ನೇತ್ರಾಲಯವು ನಡೆಸುತ್ತಿರುವ ಸೇವೆಗೆ
ಋಣಿಯಾಗಿದ್ದೇನೆ. ತಮ್ಮ ಮಾತೃ ಭೂಮಿ ಸೇವಾ ಪ್ರತಿಷ್ಟಾನವು ಮು0ದೆ ಅಗತ್ಯವಿರುವ ಸಹಕಾರ ನೀಡಲು ತಯಾರಿದೆ ಎ0ದರು. ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರು ಅತಿಥಿಗಳನ್ನು ಸ್ವಾಗತಿಸುತ್ತಾ, ಕಳೆದ ಹಲವಾರು ವರ್ಷಗಳಿ0ದ ಗೋವಾ ರಾಜ್ಯದಲ್ಲಿ ನಡೆಸುತ್ತಿರುವ ಉಚಿತ ನೇತ್ರ ಸೇವೆಗೆ ನಿರ್ದೇಶನ ಹಾಗೂ ಸಹಕಾರ ನೀಡುತ್ತಿರುವ ಗೋವಾ ಸರಕಾರ, ಸನ್ಮಾನ್ಯ ಮುಖ್ಯಮ0ತ್ರಿ, ಸಚಿವ ಶ್ರೀಪಾದ
ನಾಯಕ್ ಹಾಗೂ ಮಾತೃ ಭೂಮಿ ಸೇವಾ ಪ್ರತಿಷ್ಟಾನಕ್ಕೆ ತಮ್ಮ ಅಭಾರ ವ್ಯಕ್ತಪಡಿಸಿದರು.
ಬಿಚೋಲಿಮ್ ಶಾಸಕ, ಹಿರಿಯ ನೇತ್ರ ತಜ್ಞ ಡಾ. ಚ0ದ್ರಕಾ0ತ್ ಶೆಟ್ಯೆ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಣಿಪಾಲ ಆಸ್ಪತ್ರೆ ಗೋವಾ ಇದರ ನಿರ್ದೇಶಕ ಡಾ. ಸುರೇ0ದ್ರ ಪ್ರಸಾದ್, ವ್ಯವಸ್ಥಾಪಕ ಹರಿಪ್ರಸಾದ್, ಪ್ರಸಾದ್ ನೇತ್ರಾಲಯದ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್, ನೇತ್ರ ತಜ್ಞ ಡಾ. ಶರತ್ ಹೆಗ್ಡೆ ಉಪಸ್ಥಿತರಿದ್ದರು.