ಕಡೆಕಾರು ಚೈತನ್ಯ ಫೌಂಡೇಶನ್: ಬೆಳಕಿನ ಹಬ್ಬ ದೀಪಾವಳಿ, ಚಿತ್ರಕಲಾ ಸ್ಪರ್ಧೆ
ಉಡುಪಿ: ಕಡೆಕಾರು ಚೈತನ್ಯ ಫೌಂಡೇಶನ್ ಆಶ್ರಯದಲ್ಲಿ “ಬೆಳಕಿನ ಹಬ್ಬ ದೀಪಾವಳಿ” ಪಂಚಮ ವರುಷದ ಆಚರಣೆಯ ಅಂಗವಾಗಿ ಚಿತ್ರಕಲಾ ಸ್ಪರ್ಧೆ ನಡೆಯಿತು.
ಎಚ್.ಪಿ.ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ಚೇರ್ಮೆನ್ ಹರಿಪ್ರಸಾದ್ ರೈ ಅವರು ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ ಚೈತನ್ಯ ಫೌಂಡೇಶನ್ ವಿಶಿಷ್ಟ ರೀತಿಯಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವ ಒಂದು ಮಾದರಿ ಸಂಸ್ಥೆಯಾಗಿದೆ, ದೀಪಾವಳಿ ದೇಶದ ಎಲ್ಲಾ ಜನರು ಸೇರಿ ಆಚರಿಸುವ ಒಂದು ದೊಡ್ಡ ಹಬ್ಬ, ಚೈತನ್ಯ ಫೌಂಡೇಶನ್ ಬೆಳಕಿನ ಹಬ್ಬ ದೀಪಾವಳಿ ಆಚರಣೆಯ ಪ್ರಯುಕ್ತ ಈ ಬಾರಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು ಮಕ್ಕಳಲ್ಲಿ ಸಾಂಸ್ಕೃತಿಕ ಮನೋಭಾವನೆಯನ್ನು ಬೆಳೆಸುವ ಮತ್ತು ದೀಪಾವಳಿ ಆಚರಣೆ ಬಗ್ಗೆ ಮಕ್ಕಳ ಕ್ರಿಯಾತ್ಮಕ ಪರಿಕಲ್ಪನೆಯನ್ನು ಚಿತ್ರದ ಮೂಲಕ ಹೊರ ಹಾಕಲು ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದರು.
1-4 ನೇ ತರಗತಿ ವಿಭಾಗದಲ್ಲಿ ಪ್ರಿಯದರ್ಶಿನಿ ಪ್ರಥಮ, ತನಿಶ್ ಡಿ. ಬಂಗೇರ ದ್ವಿತೀಯ, ದಿಶಾನ್ ಆರ್. ದೇವಾಡಿಗ ತೃತೀಯ ಸ್ಥಾನ ಪಡೆದರು. 5-7 ನೇ ತರಗತಿ ವಿಭಾಗದಲ್ಲಿ ಅನ್ವಿತ್ ಆರ್. ಶೆಟ್ಟಿಗಾರ್ ಪ್ರಥಮ, ಯಾಗ್ನಿಕಾ ಎನ್. ದ್ವಿತೀಯ, ಝಯಾನ್ ಶೇಖ್ ತೃತೀಯ ಸ್ಥಾನ ಪಡೆದರು. 8-12 ನೇ ತರಗತಿ ವಿಭಾಗದಲ್ಲಿ ಅನಿಶ್ ಪ್ರಥಮ, ನಿಧಿಶ್ ದ್ವಿತೀಯ, ಬಿ. ಗಾಯತ್ರಿ ಶ್ರೀ ತೃತೀಯ ಸ್ಥಾನ ಪಡೆದರು. ತೀರ್ಪುಗಾರರಾಗಿ ಭಾಗ್ಯಲಕ್ಷ್ಮೀ, ಶಂಕರ್ ಹಾಗೂ ಪ್ರತಾಪ್ ಕುಮಾರ್ ಉದ್ಯಾವರ ಅವರ ನೇತ್ರತ್ವದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಿತು.
ಈ ಸಂದರ್ಭದಲ್ಲಿ ಮಲ್ಪೆ ಠಾಣಾ ಸಿಬ್ಬಂದಿ ಸಚಿನ್ ಬಿರದಾರ್ ಅವರು ರಸ್ತೆ ಸಂಚಾರ ನಿಯಮ ಮತ್ತು ಸೈಬರ್ ಕ್ರೈಂ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಕಾರ್ತಿಕ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಹರಿಯಪ್ಪ ಕೋಟ್ಯಾನ್, ಸಾಫಲ್ಯಾ ಟ್ರಸ್ಟ್ ಪ್ರವರ್ತಕರಾದ ನಿರುಪಮಾ ಪ್ರಸಾದ್ ಶೆಟ್ಟಿ, ಅಂಬಲಪಾಡಿ ಅನು ಆಯುರ್ವೇದದ ವೈದ್ಯೆ ಡಾ.ಸೌಮ್ಯ, ಕಡೆಕಾರು ಪಶುಚಿಕಿತ್ಸಾಲಯದ ವೈದ್ಯರಾದ ಡಾ.ಉದಯ ಕುಮಾರ್ ಶೆಟ್ಟಿ, ಕಡೆಕಾರು ಬಿಲ್ಲವ ಸಂಘದ ಅಧ್ಯಕ್ಷರಾದ ಶಂಕರ ಸುವರ್ಣ, ಸದಾನಂದ ಪೂಜಾರಿ, ಜತಿನ್ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.
ಚೈತನ್ಯ ಫೌಂಡೇಶನ್ ಅಧ್ಯಕ್ಷ ಸುನೀಲ್ ಸಾಲ್ಯಾನ್ ಕಡೆಕಾರ್ ಸ್ವಾಗತಿಸಿದರು, ನೀಲಾವತಿ ಎ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.