ಮಂಗಳೂರು: ಯುವತಿ ನಾಪತ್ತೆ

ಮಂಗಳೂರು ಅ.6: ಯುವತಿ ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಶಾಲತಾ (22) ಎಂಬ ಯುವತಿ, ಅಕ್ಟೋಬರ್ 4 ರಂದು ತನ್ನ ಮನೆಯಾದ ಶಕ್ತಿನಗರ ಶ್ರೀ ದುರ್ಗಾ ನಿಲಯದಿಂದ  ಹೋದವಳು ಮನೆಗೆ ವಾಪಾಸ್ಸು ಬಾರದೆ ಕಾಣೆಯಾಗಿದ್ದಾಳೆ.


ಕಾಣೆಯಾದ ಯುವತಿಯ ಚಹರೆ ಇಂತಿವೆ: ಹೆಸರು – ಆಶಾಲತಾ,  ಪ್ರಾಯ – 22 ವರ್ಷ, ಎತ್ತರ- 5.4 ಅಡಿ ಎತ್ತರ, ಕಪ್ಪು ಮೈಬಣ್ಣ, ಸಪೂರ ಶರೀರ, ಕೋಲು ಮುಖ, ಧರಿಸಿದ ಬಟ್ಟೆ –  ಬಿಳಿ ಮತ್ತು ಗುಲಾಬಿ ಬಣ್ಣದ ಟಾಪ್, ಹಸಿರು ಬಣ್ಣದ ಪ್ಯಾಂಟ್. ಮಾತನಾಡುವ ಭಾಷೆ ಕನ್ನಡ ತುಳು, ತಮಿಳು. ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ದೊರಕಿದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆ, ದೂ.ಸಂ: 0824-2220529, 9480805354, ಮಂಗಳೂರು ನಗರ ಕಂಟ್ರೋಲ್ ರೂಮ್ 0824-2220800 ಸಂಪರ್ಕಿಸಲು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!