ಉಡುಪಿ: ಉಪನ್ಯಾಸಕ ಮ.ನಾ.ಹೆಬ್ಬಾರ್ ನಿಧನ
ಉಡುಪಿ: ಉಪನ್ಯಾಸಕ, ಹವ್ಯಾಸಿ ಯಕ್ಷಗಾನ ಕಲಾವಿದ, ಅರ್ಥಧಾರಿ, ಕೀರ್ತನಕಾರ, ಪ್ರವಚನಕಾರ, ಲೇಖಕ ಹೀಗೆ ಸಾಂಸ್ಕøತಿಕ ದೃಷ್ಟಿಯಿಂದ ಬಹುಮುಖಿಯಾಗಿ ತೊಡಗಿಸಿಕೊಂಡಿದ್ದ ಮರೂರು ನಾರಾಯಣ ಹೆಬ್ಬಾರ್ (83)ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.
ಶ್ರೀ ಸ್ಥಾನಿಕ ಬ್ರಾಹ್ಮಣ ಸಂಘ ಉಡುಪಿಯ ಎಲ್ಲಾ ಕಾರ್ಯಕ್ರಮ ಗಳಲ್ಲಿ ಅಪಾರ ಸೇವೆ ಸಲ್ಲಿಸಿರುತ್ತಾರೆ. ಅಂಬಲಪಾಡಿ ಲಕ್ಷ್ಮಿಜನಾರ್ದನ ಯಕ್ಷಗಾನ ಕಲಾಮಂಡಳಿಯ ಆನಂದ ಗಾಣಿಗ ಪ್ರಶಸ್ತಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರು. ಶ್ರೀಸ್ಥಾನಿಕ ಬ್ರಾಹ್ಮಣ ಸಂಘ ಉಡುಪಿಯ ಅಧ್ಯಕ್ಷರು & ಸರ್ವಸದಸ್ಯರು ಹಾಗೂ ಸ್ಥಾನಿಕ ಮಹಾಮಂಡಲ ಅಧ್ಯಕ್ಷರು & ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.