ಉದ್ಯಾವರ: ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ
ಉದ್ಯಾವರ: ಫ್ರೆಂಡ್ಸ್ ಗಾರ್ಡನ್, ಬಾಲ ಗಣಪತಿ ಭಜನಾ ಮಂಡಳಿ ವತಿಯಿಂದ ಶ್ರೀಸಿದ್ಧಿ ವಿನಾಯಕ ದೇವಸ್ಥಾನ ಉದ್ಯಾವರದಲ್ಲಿ ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ ಆಯೋಜಿಸಲಾಗಿದೆ.
ಸ್ಪರ್ಧೆಯ ನಿಯಮಗಳು
• ಸಾಂಪ್ರದಾಯಿಕ ಸೀಮೆ ಕೋಲಿನ ಅಷ್ಟಪಟ್ಟಿ ಗೂಡುದೀಪಕ್ಕೆ ರೆಕ್ಕೆ,ಬಾಲ ಇರುವ ಹಾಗೆ ಕಲರ್ ಪೇಪರ್ ಅಥವಾ ಬಟ್ಟೆ ಮಾತ್ರ ಬಳಸಬೇಕು.
• ಹಣತೆಯ ದೀಪದಲ್ಲಿ ಮಾತ್ರ ಗೂಡುದೀಪ ಬೆಳಗಿಸ ಬೇಕು, ವಿದ್ಯುತ್ ದೀಪಕ್ಕೆ ಅವಕಾಶ ಇಲ್ಲ.ಹಣತೆ ಸ್ಪರ್ಧಿಗಳೇ ತರಬೇಕು ಎಣ್ಣೆ/ಬತ್ತಿ ನೀಡಲಾಗುವುದು.
• ಪ್ಲಾಸ್ಟಿಕ್, ಫೈಬರ್,ಥರ್ಮಕೂಲ್ ಇತ್ಯಾದಿಗಳನ್ನು ಉಪಯೋಗಿಸಿದರೆ ಸ್ಪರ್ಧೆಯಲ್ಲಿ ಪರಿಗಣಿಸುವುದಿಲ್ಲ.
• ಸ್ಪರ್ಧೆಗೆ ವಯೋಮಿತಿ ಇಲ್ಲ , ಸಾರ್ವಜನಿಕರಿಗೆ ಮುಕ್ತ ಅವಕಾಶ.
• ಸ್ಪರ್ಧೆ ನಡೆಯುವ ದಿನದಂದು ಸಂಜೆ 5-00 ಘಂಟೆಗೆ ಮುಂಚಿತವಾಗಿ ಗೂಡುದೀಪ ತಂದು ಪ್ರದರ್ಶನಕ್ಕೆ ಅಣಿಗೊಳಿಸಬೇಕು.
ತೀರ್ಪುಗಾರರ ನಿರ್ಣಯವೇ ಅಂತಿಮ
ಪ್ರಥಮ ಬಹುಮಾನ -5,555/
ದ್ವಿತೀಯ ಬಹುಮಾನ -3,333/
ತ್ರತೀಯ ಬಹುಮಾನ -1,111/
ಆಕರ್ಷಕ -555/ ತಲಾ ಮೂರು ಮಂದಿಗೆ.
ಬಹುಮಾನಗಳ ಎಲ್ಲಾ ಮೊತ್ತದ ಗಿಫ್ಟ್ ವೋಚರ್ ನೀಡಲಾಗುವುದು.
ದಿನಾಂಕ 27-11-2023 ಕಾರ್ತಿಕ ಹುಣ್ಣಿಮೆ (ಉಡುಪಿ ಕಡೇಲಕ್ಷ ದೀಪ) ಸೋಮವಾರ ಸಂಜೆ 6 ಕ್ಕೆ. ನವೆಂಬರ್ 25 ರ ಒಳಗೆ ಸ್ಪರ್ಧಿಗಳು ಹೆಸರನ್ನು ನೊಂದಾಯಿಸ ಬೇಕು.
ಬಹುಮಾನಗಳ ಪ್ರಾಯೋಜಕರು: ಯೋಗೀಶ್ ಕೋಟ್ಯಾನ್,ಗ್ರಾಮ ಪಂಚಾಯತ್ ಸದಸ್ಯರು ಉದ್ಯಾವರ.