ಕಾಪು: ಯಶಸ್ವಿ ಆಚಾರ್ಯಗೆ ಸರಸ್ವತಿ ಪುರಸ್ಕಾರ – ರಾಜ್ಯ ಪ್ರಶಸ್ತಿಗೆ ಆಯ್ಕೆ
ಕಾಪು(ಉಡುಪಿ ಟೈಮ್ಸ್ ವರದಿ): 2019-20 ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ 614(ಶೇ.98.24 ) ಆಂಕ ಪಡೆದಿರುವ ಉಡುಪಿ ಜಿಲ್ಲೆ ಕಾಪು ತಾಲೂಕು ಕಲ್ಯಾದ ಉಮೇಶ ಆಚಾರ್ಯ, ಶೀಲಾವತಿ ಆಚಾರ್ಯ ದಂಪತಿ ಪುತ್ರಿಯಾದ ವೈ.ಯು. ಯಶಸ್ವಿ ಆಚಾರ್ಯ ಅವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ದಾವಣಗೆರೆ-ಸಾಲಿಗ್ರಾಮ ಅವರು ನೀಡಲ್ಪಡುವ ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಾಪು ಉಳಿಯಾರಗೋಳಿ ದಂಡತೀರ್ಥ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿನಿಯಾಗಿರುವ ವೈ.ಯು. ಯಶಸ್ವಿ ಭರತನಾಟ್ಯ ಪ್ರವೀಣೆಯಾಗಿದ್ದು, ಸಾಂಸ್ಕೃತಿಕ, ಕ್ರೀಡಾ, ಶೈಕ್ಷಣಿಕ ರಂಗದ ಸಾಧಕಿಯಾಗಿದ್ದು, ಯಾವುದೇ ಕೋಚಿಂಗ್ ಪಡೆದುಕೊಳ್ಳದೆ ಸ್ವತಃ ಅಭ್ಯಸಿಸಿ ಎಸೆಸ್ಸೆಲ್ಸಿಯಲ್ಲಿ ಸಾಧಕಿಯಗಿದ್ದಾಳೆ. ರಿಯಾದ್ ಇಂಟರ್ ನ್ಯಾಷನಲ್ ಇಂಡಿಯನ್ ಸ್ಕೂಲ್‌ನಲ್ಲಿ ಕ್ಲೇ ಮಾಡೆಲಿಂಗ್, ಇಂಟರ್‌ನ್ಯಾಷನಲ್ ಚಿಂತನಾ ಡ್ರಾಯಿಂಗ್‌ನಲ್ಲಿ ಪ್ರಥಮ ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದ ಈಕೆ ಬಹುಮುಖ ಪ್ರತಿಭಾನ್ವಿತೆಯಾಗಿದ್ದಾಳೆ.
ಕನ್ನಡ ರಾಜ್ಯೋತ್ಸವದಂದು ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ವೈ.ಯು. ಯಶಸ್ವಿ ಆವರಿಗೆ ಕಿರೀಟವಿಟ್ಟು, ಪುಷ್ಪ ವೃಷ್ಟಿಯೊಂದಿಗೆ, ಸ್ಮರಣಿಕೆ, ಪ್ರಶಸ್ತಿ ಪತ್ರದೊಂದಿಗೆ ಈ ಪ್ರಶಸ್ತಿ ಪ್ರಧಾನ ನಡೆಯಲಿದೆ.