ಡಿಕೆಶಿಗಾಗಿ ಆತ್ಮಾಹುತಿ ಮಾಡಿಕೊಳ್ಳಲು ಸಿದ್ದರಿದ್ದೇವೆ: ಕಿಶನ್ ಹೆಗ್ಡೆ
ಉಡುಪಿ: (ಉಡುಪಿ ಟೈಮ್ಸ್ ವರದಿ)ಡಿಕೆ ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ, ಮಾಜಿ ಸಂಸದ ರಾಮ್ ಮೂರ್ತಿ ಅವರ ಹಾಗೆ ಹೆದರಿ ಪಕ್ಷಕ್ಕೆ ರಾಜೀನಾಮೆ ನೀಡಿ ಓಡಿ ಹೋಗುವವರಲ್ಲ, ಕೊನೆಯವರೆಗೂ ಬಿಜೆಪಿ ವಿರುದ್ಧ ಸೆಡ್ಡು ಹೊಡೆದು ಅವರ ವಿರುದ್ಧ ಹೆಣೆದ ಷಡ್ಯಂತ್ರವನ್ನು ಎದುರಿಸುವ ಶಕ್ತಿ ಅವರಿಗಿದೆಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಹೇಳಿದರು.
ಮಂಗಳವಾರ ಅಜ್ಜರಕಾಡು ಬಳಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ನಡೆದಿರುವ ಸಿಬಿಐ ದಾಳಿಯನ್ನು ಖಂಡಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕಿಶನ್ ಹೆಗ್ಡೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಿಬಿಐ ದಾಳಿ ಬಗ್ಗೆ ಮುಖ್ಯಮಂತ್ರಿಗಳು ಯಾಕೆ ಮೌನ ವಹಿಸಿದ್ದಾರೆ, ಅವರ ಮಗನ ಅವ್ಯವಹಾರ ಹೊರ ಬರುತ್ತದೆಂಬ ಭಯವಿದೆಯೇ , ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯತರು ತಮ್ಮ ಕೊನೆಯ ಹನಿ ರಕ್ತ ಇರುವ ತನಕ ಡಿಕೆಶಿಯವರಿಗೆ ಬೆಂಬಲ ವ್ಯಕ್ತ ಪಡಿಸುತ್ತೇವೆ, ಮಾತ್ರವಲ್ಲದೆ ಅವರಿಗಾಗಿ ಆತ್ಮಾಹುತಿ ಮಡಿಕೊಳ್ಳಲು ಸಿದ್ದರಿದ್ದೇವೆ ಎಂದು ಕಿಶನ್ ಹೆಗ್ಡೆ ಗುಡುಗಿದರು.
ಆಡಳಿತ ನಡೆಸುವ ಬಿಜೆಪಿ ಪಕ್ಷದ ಭ್ರಷ್ಟ ಸಚಿವರ ವಿರುದ್ಧ ತನಿಖೆ ನಡೆಸಲು ದೇಶದ ಸಿಬಿಐ ಅಧಿಕಾರಿಗಳು ಸಾಕಾಗುವುದಿಲ್ಲ, ಅಷ್ಟು ಭ್ರಷ್ಟ ಸಚಿವರು ರಾಜ್ಯದಲ್ಲಿ ಇದ್ದಾರೆಂದು ಆರೋಪಿಸಿದರು.
ಸಭೆಯ ನಂತರ ರಸ್ತೆ ತಡೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಯಿತು.
ಕಾಂಗ್ರೆಸ್ ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ಹರೀಶ್ ಕಿಣಿ, ಕಿನ್ನಿಮೂಲ್ಕಿ ಕೃಷ್ಣ ಮೂರ್ತಿ ಆಚಾರ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ವರೋನಿಕಾ ಕರ್ನೇಲಿಯೋ, ಜ್ಯೋತಿ ಹೆಬ್ಬಾರ್, ರೋಶನಿ ಒಲಿವರ್, ನವೀನ್ಚಂದ್ರ ಸುವರ್ಣ, ಸಂಜಯ್ ಆಚಾರ್ಯ, ಕೀರ್ತಿ ಶೆಟ್ಟಿ, ಅಬ್ದುಲ್ ರೆಹಮನ್ ಯತೀಶ್ ಕರ್ಕೇರ, ಕುಶಲ್ ಶೆಟ್ಟಿ, ಪ್ರಭಾಕರ್ ಆಚಾರ್ಯ ಪ್ರತಿಭಟನಾ ಸಭೆಯಲ್ಲಿದ್ದರು.
ದಲಿತ MLA ಒಬ್ಬರ ಮನೆಗೆ ಬೆಂಕಿ ಹಾಕಿದಾಗ ಮನೆಯಲ್ಲಿ ಮುಚ್ಚಿ ಕೂತ ಇವರು ಈಗ ಭ್ರಷ್ಟನ ಬೆನ್ನಿಗೆ ನಿತಿರುವದಕ್ಕೆ ನಾಚಿಕೆ ಇಲ್ಲವಾ