ಕಂಬಳ ಫಲಿತಾಂಶಕ್ಕೂ ಬಂತು ಆ್ಯಪ್! ಮಿಯಾರಿನಲ್ಲಿ ಇಂದು ಪ್ರಯೋಗಿಕ ಪರೀಕ್ಷೆ

ಪಡುಬಿದ್ರಿ: ಕಂಬಳದಲ್ಲಿ ಶಿಸ್ತು ಮತ್ತು ಸಮಯ ಪಾಲನೆಗೆ ಒತ್ತು ನೀಡುವ ಉದ್ದೇಶದಿಂದ ಕಂಬಳದಲ್ಲಿ ಕೋಣಗಳ ಸಾಲು ನಿರ್ಣಯಕ್ಕೆ ಹೊಸ ಆ್ಯಪ್‌ ಒಂದನ್ನು ಪರಿಚಯಿಸಲಾಗಿದೆ. ಈ ಆ್ಯಪ್‌ ಬಳಸಿಕೊಂಡು ನ. 11ರಂದು ಬೆಳಗ್ಗೆ 10ರಿಂದ ಮಿಯಾರಿನಲ್ಲಿ ಪ್ರಾಯೋಗಿಕ ಕಂಬಳ ಏರ್ಪಡಿಸಲಾಗಿದೆ ಎಂದು ಉಭಯ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ| ಬೆಳಪು ದೇವಿಪ್ರಸಾದ ಶೆಟ್ಟಿ ತಿಳಿಸಿದ್ದಾರೆ.

ಕಂಬಳದಲ್ಲಿ ಸ್ಪಷ್ಟವಾದ ವೀಡಿಯೋ ಫಿನಿಷ್‌, ರೋಡ್‌ ವೇ ಸಿಸ್ಟಂ, ಲೇಸರ್‌ ತಂತ್ರಜ್ಞಾನವು ಫಲಿತಾಂಶದಲ್ಲಿ ಪಾರದರ್ಶಕತೆ ತರುವಲ್ಲಿ ಯಶಸ್ವಿಯಾಗಿವೆ. ನೂತನ ಆ್ಯಪ್‌ ಕಂಬಳ ಕೋಣಗಳ ಸರತಿ ಕ್ರಮಬದ್ಧವಾಗಿ ಜೋಡಿಸಲಿದೆ. ಹಾಗೂ ಈ ನೂತನ ಟೆಕ್ನಾಲಜಿಯಿಂದ ಕೋಣಗಳ ಓಟದ ವಿಜೇತರನ್ನು ಪ್ರಶ್ನಿಸಲಾಗದ ಫಲಿತಾಂಶ ಹೊರಬಿಳಲಿದೆ ಎಂದು ಹೇಳಿದ್ದಾರೆ.

ಇನ್ನೊಂದೆಡೆ ಕಂಬಳ ಕರೆಗೆ ಕೋಣಗಳನ್ನು ನಿಗದಿತ ಸಮಯಕ್ಕೆ ಇಳಿಸಲು ಅನುಕೂಲವಾಗುವಂತೆ ಸೈರನ್‌
ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನ ಮಾಡಲಾಗುತ್ತಿದೆ. ಅನಗತ್ಯ ವಿಳಂಬವಾದರೆ ಸೈರನ್‌ ಮೂಲಕ ಎಚ್ಚರಿಸ ಲಾಗುತ್ತದೆ. ಕೋಣಕ್ಕೆ ಸಮಯದ ಅವಕಾಶ ನೀಡಿ ಬಾರದಕೋಣಗಳಿಗೆ ವಾಕ್‌ ಓವರ್‌ ನೀಡಲಾಗುವುದೆಂದು ತೀರ್ಮಾನಿ ಸಲಾಗಿದೆ ಎಂದಿದ್ದಾರೆ.

ಈ ಪ್ರಾಯೋಗಿಕ ಕಂಬಳ ಮಹತ್ವದ್ದಾಗಿದ್ದು ಕಂಬಳದ ಯಜಮಾನರು, ವ್ಯವಸ್ಥಾಪಕರು, ಕೋಣಗಳ ಯಜ ಮಾನರು, ತೀರ್ಪುಗಾರರು, ಕೋಣ ಓಡಿಸುವವರು, ಕೋಣಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದೆ. ಕಂಬಳ ಸಮಿತಿಯ ಮತ್ತು ಶಿಸ್ತು ಸಮಿತಿ ಹಾಗೂ ತೀರ್ಪುಗಾರರ ನೇತೃತ್ವದಲ್ಲಿ ಇದು ನಡೆಯಲಿದೆಂದು ಜಿಲ್ಲಾ ಕಂಬಳ ಸಮಿತಿಯ ಡಾ| ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!