ಮಣಿಪಾಲ: ಕ್ರಿಸ್ಮಸ್ ಕೇಕ್ ತಯಾರಿಕೆಗೆ ಮಿಕ್ಸಿಂಗ್ ಕಾರ್ಯ
ಮಣಿಪಾಲ, ನ.8: ಮಣಿಪಾಲದ ವೆಲ್ಕಮ್‌ಗ್ರೂಪ್ ಗ್ರಾಜುಯೇಟ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿನಿಷ್ಟೇಷನ್ (ವಾಗ್ಷಾ) ವತಿಯಿಂದ ಮುಂಬರುವ ಕ್ರಿಸ್ಮಸ್ ಹಬ್ಬದ ಸಂದರ್ಭಕ್ಕಾಗಿ ಸಾಂಪ್ರದಾಯಿಕ ಕೇಕ್ ಮಿಕ್ಸ್ ಕಾರ್ಯಕ್ರಮ ಬುಧವಾರ ಸಂಜೆ ಗಣ್ಯರ ಸಮ್ಮುಖದಲ್ಲಿ ನಡೆಯಿತು.
ಗಣ್ಯರು ಬಾಣಸಿಗ ಟೋಪಿಗಳು ಮತ್ತು ಅಪ್ರಾನ್‌ಗಳನ್ನು ಧರಿಸಿ ಒಣದ್ರಾಕ್ಷಿ, ಸಕ್ಕರೆ ಪಾಕದಲ್ಲಿ ಹಾಕಿದ ಹಣ್ಣಿನ ಸಿಪ್ಪೆಗಳು, ಖರ್ಜೂರ, ಚೆರ್ರಿಗಳು ಮತ್ತು ಪರಿಮಳಯುಕ್ತ ಮಲಾಸೆಗಳಂತಹ ಪದಾರ್ಥಗಳನ್ನು ಮಿಶ್ರಣ ಮಾಡಿದರು. ಸುಮಾರು 160 ಕೆ.ಜಿ. ಹಣ್ಣುಗಳು ಮತ್ತು ಬೀಜಗಳನ್ನು ಕಲಸಿ ನೆನಸಿ ಇಡಲಾಯಿತು.
ಇವುಗಳನ್ನು ಕ್ರಿಸ್ಮಸ್ ಅವಧಿಯಲ್ಲಿ ಸುಮಾರು 1000 ಕೆ.ಜಿ. ಯಷ್ಟು ಕ್ರಿಸ್ಮಸ್ ಪ್ಲಮ್ ಕೇಕ್ ತಯಾರಿಸಲು ಬಳಸಲಾಗು ತ್ತದೆ. ಈ ಕೆಕ್‌ನ್ನು ಮಾಹೆ ಅಧಿಕಾರಿ ಗಳು ಮತ್ತು ಇತರ ಗಣ್ಯರಿಗೆ ವಿತರಿಸಲಾಗುತ್ತದೆ. ಅಲ್ಲದೆ ವಾಗ್ಷಾ ಕ್ಯಾಂಪಸ್ ನಲ್ಲಿರುವ ವಿದ್ಯಾರ್ಥಿಗಳು ನಡೆಸುವ ಕೆಫೆಯಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ವಾಗ್ಷಾ ಪ್ರಾಂಶುಪಾಲ ಚೆಫ್ ಕೆ.ತಿರು ಮಾಹಿತಿ ನೀಡಿದರು.
ಕೇಕ್ ಮಿಕ್ಸಿಂಗ್ ಕಾರ್ಯಕ್ಕೆ ಮಾಹೆ ಟ್ರಸ್ಟಿ ವಸಂತಿ ಪೈ ಚಾಲನೆ ನೀಡಿದರು. ಪ್ರೊ ಚಾನ್ಸಲರ್ ಡಾ.ಎಚ್. ಎಸ್. ಬಲ್ಲಾಳ್, ಇಂದಿರಾ ಬಲ್ಲಾಳ್, ಕುಲಪತಿ ಲೆ.ಜ.ಡಾ.ಎಂ. ಡಿ.ವೆಂಕಟೇಶ್, ಸಹ ಕುಲಪತಿ ಡಾ.ಶರತ್ ಕುಮಾರ್ ರಾವ್, ಎಂಐಟಿ ನಿರ್ದೇಶಕ ಡಾ.ಅನಿಲ್ ರಾಣಾ, ಕೆಎಂಸಿ ಡೀನ್ ಡಾ.ಪದ್ಮರಾಜ್ ಹೆಗ್ಡೆ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಡಾ.ನಾರಾಯಣ ಸಭಾ ಹಿತ್, ಡಾ.ಗಿರಿಧರ್ ಕಿಣಿ ಮೊದಲಾದವರು ಉಪಸ್ಥಿತರಿದ್ದರು.