ನಿಟ್ಟೆ: ಗ್ರಂಥಪಾಲಕ ಪ್ರೀತಮ್ ಶೆಟ್ಟಿ ಕೆ.ವಿ ಅವರಿಗೆ ಪಿಎಚ್.ಡಿ ಪದವಿ

ಕಾರ್ಕಳ: ನಿಟ್ಟೆ ಪರಿಗಣೆತ ವಿಶ್ವವಿದ್ಯಾಲಯದ ಅಂಗ ಸಂಸ್ಥೆ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಶಿಕ್ಷಣ ಸಂಸ್ಥೆಯ ಗ್ರಂಥಪಾಲಕರಾಗಿರುವ ಪ್ರೀತಮ್ ಶೆಟ್ಟಿ ಕೆ.ವಿ ಅವರು “ಕರ್ನಾಟಕದ ತಾಂತ್ರಿಕ ಕಾಲೇಜುಗಳ ಶೈಕ್ಷಣಿಕ ಸಮುದಾಯದಲ್ಲಿ ವಿಟಿಯು ಒಕ್ಕೂಟದ ಉಪಯುಕ್ತತೆ ಮತ್ತು ಪರಿಣಾಮ ಒಂದು ಅಧ್ಯಯನ” ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿದೆ.

ಇದೇ ಸಂಸ್ಥೆಯ ಸ್ಥಾಪಕ ಗ್ರಂಥ ಪಾಲಕರಾಗಿದ್ದ ಡಾ. ಹೆಚ್ ದಿವಾಕರ ಭಟ್ ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಮಂಡಿಸಿರುವ ಇವರು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 16 ವರ್ಷಗಳಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿರುವರು. ಇವರು ಉಡುಪಿ ದೆಂದೂರುಕಟ್ಟೆ ಕೌಸ್ತುಭ ನಿಲಯದ ಟಿ. ವಿಠಲ್ ಶೆಟ್ಟಿ ಮತ್ತು ಸುಮಾ ವಿ ಶೆಟ್ಟಿ ದಂಪತಿಗಳ ಪುತ್ರರಾಗಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!