ಫೆಬ್ರವರಿಯಲ್ಲಿ ವಾರಾಹಿ ನೀರು- ಅಗ್ಗದ ಪ್ರಚಾರಕ್ಕಿಂತ ಮೊದಲು ಸಮರ್ಪಕವಾದ ಕೆಲಸ ಮಾಡಿಸಿ: ಸುರೇಶ್ ಶೆಟ್ಟಿ

ಉಡುಪಿ: ನಗರಸಭಾ ವ್ಯಾಪ್ತಿಗೆ ವಾರಾಹಿ ನೀರು ಫೆಬ್ರವರಿ ತಿಂಗಳಲ್ಲಿ ಉಡುಪಿಯ ನಗರದ ಜನತೆಗೆ ನೀಡುತ್ತೇವೆ ಎಂದು ಉಡುಪಿ ಶಾಸಕರ ಹೇಳಿಕೆ ಕೇವಲ ಪ್ರಚಾರಕ್ಕಾಗಿ ಹೇಳಿದ ಹೇಳಿಕೆಯಂತೆ ತೋರುತ್ತಿದೆ. ವಾರಾಹಿ ನದಿ ನೀರಿನ ಜೋಡಣೆಯು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಆಗದಿದ್ದು, ಈ ಬಗ್ಗೆ ಉಡುಪಿ ಶಾಸಕರು ಹಾಗೂ ಉಡುಪಿ ಜಿಲ್ಲಾಧಿಕಾರಿಯವರು ನಗರಸಭೆಯ ಕಮಿಷನ್‌ರವರು ಕೂಡಲೇ ಗಮನಹರಿಸಿ ಈ ಜೋಡಣೆ ಕೆಲಸವನ್ನು ಪ್ರಪ್ರಥಮವಾಗಿ ಮಾಡಿಸಿದ ನಂತರ ಅದು ಸರಿಯಾಗಿದೆ ಎಂದು ತಿಳಿದು ನಿಮ್ಮ ಹೇಳಿಕೆಯನ್ನು ನೀಡಿ.

ನಮ್ಮ ಶಿರಿಬೀಡು ವರ್ಡ್ ನ ವ್ಯಾಪ್ತಿಯಲ್ಲಿ ಈ ನೀರಿನ ಜೋಡಣೆ ಕೆಲಸ ಸಮರ್ಪಕವಾಗಿ ಆಗಲಿಲ್ಲ. ಇದಕ್ಕೆ ಹೊಣೆ ಯಾರು?. ಸ್ಥಳೀಯ ನಾಗರಿಕರು ಈ ಬಗ್ಗೆ ಪ್ರಶ್ನಿಸಿದರೆ ರಸ್ತೆಯನ್ನು ಅಗೆದು ಕೊಡಿ ನಂತರ ನಿಮಗೆ ನಳ್ಳಿ ನೀರಿನ ಜೋಡಣೆಯನ್ನು ಮಾಡುತ್ತೇವೆ ಎಂದು ಉಡಾಫೆಯ ಉತ್ತರವನ್ನು ಈ ಕಾಮಗಾರಿ ನಡೆಸುತ್ತಿರುವ ಕಾಂಟ್ರಾಕ್ಟ್ದಾರರು ಹೇಳುತ್ತಿದ್ದಾರೆ. ಜನಸಾಮಾನ್ಯರನ್ನು ಬೆದರಿಸುತ್ತಿದ್ದಾರೆ. ಈ ಬಗ್ಗೆ ಶಾಸಕರು ಉತ್ತರಿಸಬೇಕಾಗಿದೆ ಎಂದು‌ ಸುರೇಶ್ ಶೆಟ್ಟಿ ಆರೋಪಿಸಿದ್ದಾರೆ.

ಜನಸಾಮಾನ್ಯರಿಗೆ ರಸ್ತೆಯನ್ನು ಅಗೆಯಲು ಸಾಧ್ಯವೇ? ರಸ್ತೆಯನ್ನು ಅಗೆದು ಕೊಟ್ಟರೆ ಮಾತ್ರ ನಮಗೆ ಈ ನೀರಿನ ಸೌಭಾಗ್ಯವೇ ಎಂದು ಉಡುಪಿಯ ಜನತೆಗೆ ಸರಿಯಾಗಿ ತಿಳಿಸಿ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಬೇಕಾಗಿದೆ.

ನಂತರದ ದಿನಗಳಲ್ಲಿ ಹೇಳಿಕೆಯನ್ನು ನೀಡಿ ನಿಮ್ಮ ಅಗ್ಗದ ಪ್ರಚಾರದ ಅವಶ್ಯಕತೆ ಉಡುಪಿಯ ಜನತೆಗೆ ಇಲ್ಲ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!