ಅಂಬೇಡ್ಕರ್ ಭವನದಲ್ಲಿ ಎಣ್ಣೆ ಪಾರ್ಟಿ- ನಾಲ್ವರ ವಿರುದ್ಧ ದೂರು ದಾಖಲು

ಬ್ರಹ್ಮಾವರ: ವಾರಂಬಳ್ಳಿ ಗ್ರಾಮದ ತೆಂಕುಬಿರ್ತಿಯ ದಸಂಸ ಮುಖಂಡ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಆಯ್ಕೆಯಾದ ತನ್ನ ಮಗನ ಅಭಿನಂದನ ಸಮಾರಂಭ ನೆಪದಲ್ಲಿ ಅಂಬೇಡ್ಕರ್ ಭವನದಲ್ಲಿ ಮದ್ಯಪಾನದ ಪಾರ್ಟಿ ಆಯೋಜಿಸಿರುವ ವಿರುದ್ಧ ನಾಲ್ವರ ವಿರುದ್ಧ ದೂರು ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ.

ದಸಂಸ‌ ಮುಖಂಡ ಶಾಮರಾಜ್ ಬಿರ್ತಿ ಅವರ ಮಗ ರಾಷ್ಟ್ರಿಯ ಕ್ರೀಡಾಕೂಟದಲ್ಲಿ ಆಯ್ಕೆಯಾಗಿರುವ ಉದ್ದೇಶದಿಂದ ಅಭಿನಂದನ ಸಮಾರಂಭ ನ.5 ರಂದು ತೆಂಕುಬಿರ್ತಿಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದರು. ಸಮಾರಂಭ ಮುಗಿದ ಬಳಿಕ ಆರೋಪಿತರಾದ ಶಾಮರಾಜ್ ಭಿರ್ತಿ, ಸುರೇಶ, ಶಿವ ಮತ್ತು ಪ್ರಶಾಂತ ಅವರು ತಮ್ಮ ಸ್ನೇಹಿತರೊಂದಿಗೆ ಸೇರಿ ಅಂಬೇಡ್ಕರ್ ‌ಭವನದ‌ ಒಳಗೆ ಮದ್ಯಪಾನ ಮಾಡುತ್ತಿದ್ದರು. 

ಈ ಬಗ್ಗೆ ವಾರಂಬಳ್ಳಿಯ ಸವಿತಾ ಅವರು ಮದ್ಯಪಾನ ಮಾಡುತ್ತಿರುವುದಕ್ಕೆ ಅಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಅವರು ಮದ್ಯಪಾನ ಮಾಡುತ್ತಿರುವ ತಂಡದ ವಿಡಿಯೋ ಚಿತ್ರೀಕರಣವನ್ನು ಮಾಡಿದ್ದರು. ವಿಡಿಯೋ ಚಿತ್ರೀಕರಣ ಮಾಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ‌ ತಂಡವು ಸವಿತಾ ಅವರನ್ನು ಅವಾಚ್ಯ‌ ಶಬ್ದಗಳಿಂದ  ನಿಂದಿಸಿ ಬೆದರಿಕೆ ಹಾಕಿದ್ದರು‌ ಎಂದು ಮಹಿಳೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು‌ ದಾಖಲಿದ್ದಾರೆ.

ಸ್ಥಳೀಯ ಪಂಚಾಯಿತ್ ಅಥವಾ ಸಂಬಂಧ ಪಟ್ಟ ಇಲಾಖೆಯಿದ ಅನುಮತಿ ಪಡೆಯದೇ ಅಂಬೇಡ್ಕರ್ ಭವನಕ್ಕೆ ಅತಿಕ್ರಮ ಪ್ರವೇಶ ಮಾಡಿ ಭವನವನ್ನು ದುರುಪಯೊಗ ಪಡಿಸಿಕೊಂಡು ಕಾನೂನು ಬಾಹಿರವಾಗಿ ಮಧ್ಯಪಾನ ಪಾರ್ಟಿ ಮಾಡಿರುವುದರ ವಿರುದ್ಧ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!