ಯಡಿಯೂರಪ್ಪ ಸರ್ಕಾರದ ಭ್ರಷ್ಟಾಚಾರ ಸಿಬಿಐ ಹೊರ ತೆಗೆಯಲಿ: ವೆರೋನಿಕಾ

ಉಡುಪಿ: ರಾಜಕೀಯ ಕಾರಣಗಳಿಗಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡು  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆಸಿರುವುದನ್ನು ಕೆಪಿಸಿಸಿ ಸದಸ್ಯೆ ವೆರೋನಿಕಾ ಕರ್ನೆಲಿಯೋ ಖಂಡಿಸಿದ್ದಾರೆ. ಬಿಜೆಪಿ ನೇತೃತ್ವದ ಸರಕಾರ ಚುನಾವಣೆಯ ಸಂದರ್ಭಗಳಲ್ಲಿ ಕಾಂಗ್ರೆಸ್ ನಾಯಕರ ಮನೋಸ್ಥೈರ್ಯವನ್ನು ಕುಗ್ಗಿಸಲೆಂದು ಆಡಳಿತ ಯಂತ್ರವನ್ನು ಉಪಯೋಗಿಸಿಕೊಂಡು ನಿರಂತರವಾಗಿ ದಾಳಿ ಮಾಡಿಕೊಂಡು ಬಂದಿರುತ್ತದೆ. 

ಒಂದೆಡೆ ಬಿಜೆಪಿಗೆ ಸೋಲುವ ಭಯದಿಂದಲೇ ಇಂತಹ ದಾಳಿಗಳನ್ನು ಮಾಡಹೊರಟಿದ್ದು ಖಂಡನೀಯವಾಗಿದೆ. ತಮ್ಮಲ್ಲಿ ಅಧಿಕಾರವನ್ನು ದುರುಪಯೋಗಪಡಿಸುವ ಕೆಲಸ ಮಾಡಹೊರಟಿರುವ ಬಿಜೆಪಿ ಸರಕಾರದ ಇಂತಹ ಬೆದರಿಕೆಗೆ ಕಾಂಗ್ರೆಸ್ ಎಂದೂ ಕೂಡ ಹೆದರುವುದಿಲ್ಲ. ಹೋರಾಟದಿಂದಲ್ಲೇ ಮೇಲೆ ಬಂದಿರುವ ಡಿ ಕೆ ಶಿವಕುಮಾರ್ ಅವರೊಂದಿಗೆ ಇಡೀ ಕಾಂಗ್ರೆಸ್ ಕುಟುಂಬವಿದ್ದು ಅವರ ಪರವಾಗಿ ನಿಲ್ಲುತ್ತದೆ ಮತ್ತು ಉಪಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ಮೂಲಕ ಬಿಜೆಪಿಗೆ ಉತ್ತರ ನೀಡಲಿದೆ.

ಕೇವಲ ರಾಜಕೀಯ ಕಾರಣಗಳಿಗೆ ಕಾಂಗ್ರೆಸ್ ನಾಯಕರ ಮೇಲೆ ಇಡಿ ಸಿಬಿಐ ದಾಳಿ ಮಾಡುವ ಕೇಂದ್ರದ ಬಿಜೆಪಿ ಸರಕಾರ ನಿಜವಾದ ನೈತಿಕತೆ ಇದ್ದರೆ ಅವರದ್ದೇ ಮುಖ್ಯಮಂತ್ರಿ ಆಗಿರುವ ಬಿ ಎಸ್ ಯಡ್ಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ಭ್ರಷ್ಠಾಚಾರವನ್ನು ಕಾಂಗ್ರೆಸ್ ಪಕ್ಷ ಸದನದಲ್ಲಿ ಪ್ರಶ್ನಿಸಿದ್ದರೂ ಕೂಡ ಯಾವುದೇ ತನಿಖೆ ನಡೆಸಲು ಸಿದ್ದವಿಲ್ಲ.  ನಿಜವಾಗಿ ಭಷ್ಟಾಚಾರ ನಿಗ್ರಹ ಮಾಡುವುದಿದ್ದರೆ ಯಡಿಯೂರಪ್ಪ ಸರ್ಕಾರದ ಭ್ರಷ್ಟಾಚಾರವನ್ನು ಸಿಬಿಐ ಹೊರ ತೆಗೆಯಲಿ  ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!