ಉಡುಪಿ: ಮತ್ತೆ 13 ಕೊರೋನಾ ಪಾಸಿಟಿವ್, 45 ಮಂದಿ ಗುಣಮುಖರಾಗಿ ಡಿಸ್ಚಾರ್ಜ್
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶನಿವಾರ ಮತ್ತೆ 13 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ.ಉಡುಪಿಯಲ್ಲಿ13 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಜಿಲ್ಲೆಯಲ್ಲಿ ಕೊರೋನ ಪೀಡಿತರ ಸಂಖ್ಯೆ 177 ಕ್ಕೆ ಏರಿಕೆ ಆಗಿದೆ.
ಜಿಲ್ಲೆಯಲ್ಲಿ ಇಂದು ಒಂದೇ ದಿನ 45 ಮಂದಿ ಪಾಸಿಟಿವ್ ಕೊರೊನಾ ಇದ್ದವರು ರೋಗಮುಕ್ತರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಪೈಕಿ 18 ಮಕ್ಕಳನ್ನು ಟಿಎಂಎ ಪೈ ಕೋವಿಡ್ 19 ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಕ್ವಾರಂಟೈನ್ ಸೆಂಟರಿಂದ ಮನೆಗೆ ಹೋದವರಲ್ಲಿ ಸೋಂಕು ಧೃಡವಾಗಿದ್ದು ಇದರಲ್ಲಿ 10 ಪುರುಷ, ಎರಡು ಮಕ್ಕಳು, ಓರ್ವ ಮಹಿಳೆಗೆ ಕೋವಿಡ್19 ಪಾಸಿಟಿವ್ ಪತ್ತೆಯಾಗಿದೆ. ಇಂದು ಪತ್ತೆಯಾದ ಪ್ರಕರಣಗಳಲ್ಲಿ ಮಹಾರಾಷ್ಟ್ರ – 12, ತೆಲಂಗಾಣ – 1 ಸೋಂಕು ದೃಢವಾಗಿದೆ. 13 ಸೋಂಕಿತರ ಮನೆ ಆಸುಪಾಸು ಕಂಟೈನ್ಮೆಂಟ್ ಮಾಡುವ ಸಾಧ್ಯತೆ ಇದೆ. ಸೋಂಕಿತರನ್ನು ಮನೆಯಿಂದ ಆಸ್ಪತ್ರೆಗೆ ದಾಖಲಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿದೆ.
ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಗೆ ಶನಿವಾರ ಮತ್ತೊಂದು ಬಲಿಯಾಗಿದ್ದು, ಒಂದೇ 141 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 2922ಕ್ಕೆ ಏರಿಕೆಯಾಗಿದೆ.ಇಂದು ಹೊಸದಾಗಿ ಪತ್ತೆಯಾದ 141 ಸೋಂಕಿತರ ಪೈಕಿ 90 ಜನರು ಹೊರರಾಜ್ಯದ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.
ಬೆಂಗಳೂರು ನಗರ 33, ಯಾದಗಿರಿ 18, ದಕ್ಷಿಣ ಕನ್ನಡ 14, ಉಡುಪಿ 13, ಹಾಸನ 13, ವಿಜಯಪುರ 11, ಶಿವಮೊಗ್ಗ 6,ಕಲಬುರಗಿಯಲ್ಲಿ 2, ಬೆಳಗಾವಿ 1, ದಾವಣಗೆರೆಯಲ್ಲಿ 4, ಬೀದರ್ ನಲ್ಲಿ 10, ಮೈಸೂರಿನಲ್ಲಿ 2, ಉತ್ತರಕನ್ನಡದಲ್ಲಿ 2, ಉತ್ತರ ಕನ್ನಡದಲ್ಲಿ 2, ಧಾರವಾಡದಲ್ಲಿ 2, ಚಿತ್ರದುರ್ಗದಲ್ಲಿ 1, ತುಮಕೂರಿನಲ್ಲಿ 1, ಕೋಲಾರದಲ್ಲಿ 3, ಬೆಂಗಳೂರು ಗ್ರಾಮಾಂತರದಲ್ಲಿ 1,ಹಾವೇರಿಯಲ್ಲಿ 4 ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ನಗರದಲ್ಲಿ ಒಂದೇ ಕುಟುಂಬದ 20 ಜನರಿಗೆ ಸೋಂಕು ಪತ್ತೆಯಾಗಿದೆ.
ಬೀದರ್ ನ 47 ವರ್ಷದ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ 8 ವರ್ಷದಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಇವರು, ಮೇ 24ರಂದು ಆಸ್ಪತ್ರೆಗೆ ದಾಖಲಾಗಿದ್ದು, ಮೇ 28ರಂದು ಮೃತಪಟ್ಟಿದ್ದಾರೆ. ಇದರಿಂದ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 49ಕ್ಕೇರಿಕೆಯಾಗಿದೆ.
ಇನ್ನು ಶನಿವಾರ ಒಂದೇ ದಿನ 103 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕಲಬುರಗಿಯಿಂದ 43, ಬೆಂಗಳೂರು ನಗರದಿಂದ 23, ದಾವಣಗೆರೆ 20, ಕೋಲಾರ 5, ಬಾಗಲಕೋಟೆ 3, ಬೀದರ್ 3 ಮಂದಿ ಚೇತರಿಕೆ ಕಂಡಿದ್ದಾರೆ. ಇಲ್ಲಿಯವರೆಗೆ ಒಟ್ಟು 997 ಮಂದಿ ಗುಣಮುಖರಾಗಿದ್ದಾರೆ, ಸದ್ಯ ರಾಜ್ಯದಲ್ಲಿ 1874 ಸಕ್ರಿಯ ಪ್ರಕರಣಗಳಿದ್ದು, 15 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರ 15728 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಒಟ್ಟು ಇಲ್ಲಿಯವರೆಗೆ 2.80 ಜನರ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 2922 ಜನರಿಗೆ ಸೋಂಕು ದೃಢಪಟ್ಟಿದೆ.