ಪುತ್ತಿಗೆ ಪರ್ಯಾಯ ಮಹೋತ್ಸವ: ಹೊರೆ ಕಾಣಿಕೆ ಸಮಿತಿ ಸಭೆ

ಉಡುಪಿ: ಜನವರಿ ತಿಂಗಳಲ್ಲಿ ನಡೆಯಲಿರುವ ಪುತ್ತಿಗೆ ಮಠದ ಪರ್ಯಾಯ ಮಹೋತ್ಸವದ ಹೊರೆಕಾಣಿಕೆ ಸಮಿತಿ ಸಭೆಯು ರವಿವಾರ ಪುತ್ತಿಗೆ ಮಠದ ಸಭಾಂಗಣದಲ್ಲಿ ನಡೆಯಿತು.

ಹೊರೆಕಾಣಿಕೆ ಸಮಿತಿಯ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಾತನಾಡಿ, ಪುತ್ತಿಗೆ ಸ್ವಾಮೀಜಿಗಳ ಪರ್ಯಯಾ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸುವ ಹಿನ್ನೆಲೆಯಲ್ಲಿ ಹೊರಕಾಣಿಕೆ ಮೆರವಣಿಗೆ ಯನ್ನು ಅದ್ದೂರಿಯಾಗಿ ನಡೆಸಲು ಚಿಂತನೆ ನಡೆಸಲಾಗಿದೆ. ಸುಮಾರು 50 ಭಾಗದಲ್ಲಿ ಹೊರೆಕಾಣಿಕೆ ಸಮಿತಿಯನ್ನು ಮಾಡಲಿದ್ದೇವೆ. ಅಲ್ಲಲ್ಲಿ ಸಭೆಗಳನ್ನು ನಡೆಸಿ ಹೊರೆಕಾಣಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಮಾರ್ಗದರ್ಶನ ನೀಡಲಾಗುತ್ತಿದೆ. ಇದೊಂದು ವಿಶ್ವಮಟ್ಟದ ಪರ್ಯಾಯವಾಗಿದ್ದು ನಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಿದ್ದೇವೆ ಎಂದು ತಿಳಿಸಿದರು.

ಸಮಿತಿಯ ಪ್ರ. ಕಾರ್ಯದರ್ಶಿ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಉಭಯ ಜಿಲ್ಲೆಯ ಸಹಕಾರಿಗಳು ಸೇರಿ ಉತ್ತಮ ರೀತಿಯಲ್ಲಿ ಹೊರೆಕಾಣಿಕೆ ನೀಡ ಬೇಕೆಂದು ಮನವಿ ಮಾಡಿದ್ದೇವೆ. ಬೇರೆ ಬೇರೆ ಸಂಸ್ಥೆಗಳಿಗೆ ಎಲ್ಲ ಮಾಹಿತಿ ನೀಡಿದ್ದು, ಹೊರೆಕಾಣಿಕೆ ಮೆರವಣಿಗೆಯ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. ಅದೊಂದು ನಾಡ ಹಬ್ಬದ ರೀತಿಯಲ್ಲಿ ನಡೆಯಲಿದೆ. ಸರಕಾರದ ವತಿಯಿಂದ ವಹಿಸಬೇಕಾದ ಜವಾಬ್ದರಿಯ ಬಗ್ಗೆಯೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಸಭೆಯಲ್ಲಿ ಆನೆಗುಡ್ಡೆ ವಿನಾಯಕ ದೇವಸ್ಥಾನ ಮ್ಯಾನೆಜಿಂಗ್ ಟ್ರಸ್ಟಿ ಕೆ.ರಮಣ ಉಪಾಧ್ಯಾಯ, ಕೃಷ್ಣಮೂರ್ತಿ ಆಚಾರ್ಯ, ಅಮೃತಾ ಕೃಷ್ಣಮೂರ್ತಿ, ಯೋಗೀಶ್ ಶೆಟ್ಟಿ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಬ್ರಾಹ್ಮಣ ಸಭಾದ ಮಂಜುನಾಥ ಉಪಾಧ್ಯ, ಶ್ರೀಕಾಂತ ನಾಯಕ್, ಶಶಿಕಾಂತ್ ಪಡುಬಿದ್ರಿ, ಜ್ಯೋತಿ ದೇವಾಡಿಗ, ಮಾತೃ ಮಂಡಳಿಯ ಪದ್ಮಾ, ಶ್ರೀಕಾಂತ್ ಸಿದ್ದಾಪುರ, ಉದಯ್ ಮಠದಬೆಟ್ಟು, ಕೃಷ್ಣ ರಾವ್ ಕೊಡಂಚ, ಭಾಸ್ಕರ್ ರಾವ್ ಕಿದಿಯೂರು, ಎಲ್.ಎನ್.ಹೆಗ್ಡೆ, ರಾಘವೇಂದ್ರ ಕಿಣಿ, ರಾಘವೇಂದ್ರ ಭಟ್ ಕನರ್ಪಾಡಿ, ರಘುಪತಿ ರಾವ್, ಚೈತನ್ಯ ಮೊದಲಾದವರು ಉಪಸ್ಥಿತರಿದ್ದರು.

ಮಠದ ದಿವಾನ ನಾಗರಾಜ್ ಆಚಾರ್ಯ ಸ್ವಾಗತಿಸಿದರು. ವಿಜಯ ರಾಘವ ವಂದಿಸಿದರು. ರವೀಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!