ಮಣಿಪಾಲ: ಅಪರಿಚಿತನ ಕರೆ ನಂಬಿ 12 ಲಕ್ಷ ರೂ. ಕಳಕೊಂಡ ಮಹಿಳೆ
ಮಣಿಪಾಲ: ಮಹಿಳೆಯೋರ್ವರಿಗೆ ಅಪರಿಚಿತ ಕರೆ ಮಾಡಿ ಬ್ಯಾಂಕ್ ಖಾತೆಯ ಸುಮಾರು 12 ಲಕ್ಷ ರೂ ವಂಚಿಸಿದ ಘಟನೆ ಮಣಿಪಾಲದಲ್ಲಿ ನಡೆದಿದೆ.
ಶಿವಳ್ಳಿ ಗ್ರಾಮದ ಸುಪ್ರಜಾ ಎಂಬವರು ವಂಚನೆಯ ಕರೆ ನಂಬಿ ಮೋಸ ಹೋದ ಮಹಿಳೆಯಾಗಿದ್ದಾರೆ.
ಅಕ್ಟೋಬರ್ 27ರಿಂದ ಅ.30ರವರೆಗೆ ಅಪರಿಚಿತನೋರ್ವ ಸುಜಾತಾ ಅವರಿಗೆ ಕರೆ ಮಾಡಿ ಮಲ್ಟಿ ಅಸ್ಸೆಟ್ ಪೋರ್ಟ್ ಪೋಲಿಯೋ ಎಂಬ ವಿಷಯದ ಬಗ್ಗೆ ಮಾತನಾಡಿ ಯಾಮಾರಿಸಿ ಅವರ ಎಸ್.ಬಿ.ಐ ಖಾತೆಯಿಂದ ಒಟ್ಟು 12,04,400 ರೂ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಆತ ಯಾವುದೇ ನಿಖರ ಮಾಹಿತಿ ನೀಡದೇ , ಹಣವನ್ನೂ ವಾಪಾಸು ನೀಡದೆ ಮೊಬೈಲ್ ನಂಬರ್ ಸ್ವಿಚ್ ಆಪ್ ಮಾಡಿ ವಂಚಿಸಿದ್ದಾನೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.