ರೈಲಿನಲ್ಲಿ ಹಿರಿಯ ನಾಗರಿಕರಿಗೆ ವಿನಾಯತಿ ದರದ ಟಿಕೆಟ್ ಜಾರಿಗೆ ಆಗ್ರಹ

ಉಡುಪಿ:ಭಾರತದ ರೈಲು ಪ್ರಯಾಣದಲ್ಲಿ ಹಲವು ವರ್ಷಗಳಿಂದ ಹಿರಿಯ ನಾಗರಿಕರಿಗೆ ಪ್ರಯಾಣದ ಟಿಕೇಟು ದರದಲ್ಲಿ ರಿಯಾಯತಿ ಇತ್ತು. ಕೊರೊನಾದ ತುರ್ತು ಸಂದರ್ಭದಲ್ಲಿ ಕೇಂದ್ರ ಸರಕಾರವು ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ವಿನಾಯಿತಿ ದರವನ್ನು ರದ್ದುಗೊಳಿಸಿ,ಪೂರ್ಣ ಪ್ರಮಾಣದ ಟಿಕೆಟ್ ಪಡೆಯಬೇಕು ಎನ್ನುವ ನಿಯಮ ಜಾರಿಗೊಳಿಸಿತು. 

ಈವಾಗ ಕೊರೊನಾ ದೇಶದಿಂದ ದೂರವಾದರೂ ಇದುವರೆಗೂ ಹಿರಿಯ ನಾಗರಿಕರಿಗೆ ವಿನಾಯತಿ ದರದ ಪ್ರಯಾಣ ಟಿಕೇಟ್ ಮರು ಜಾರಿಗೆ ತಂದಿಲ್ಲ. ದೇಶದಲ್ಲಿ ಕೋಟ್ಯಾಂತರ ಬಡ ಹಿರಿಯ ನಾಗರಿಕರಿಗೆ ಅನುಕೂಲವಾಗಿದ್ದ ವಿನಾಯಿತಿ ಪ್ರಯಾಣ ದರದ ಯೋಜನೆ, ರದ್ದಾದರಿಂದ ಹಿರಿಯ ನಾಗರಿಕರು ಸಂಕಷ್ಟದಲ್ಲಿ  ಸಿಲುಕಿದ್ದಾರೆ. ತಕ್ಷಣ ಕೇಂದ್ರ ಸರಕಾರವು ರೈಲು ಪ್ರಯಾಣದಲ್ಲಿ ಹಿರಿಯ ನಾಗರಿಕರಿಗೆ ವಿನಾಯತಿ ದರವನ್ನು ಮರು ಜಾರಿಗೊಳಿಸಬೇಕು, ಜನಪ್ರತಿನಿಧಿಗಳು ಈ ಬಗ್ಗೆ ಧ್ವನಿ ಎತ್ತಬೇಕೆಂದು ಉಡುಪಿಯ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಅವರು ಆಗ್ರಹಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!