ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್- ಪ್ರೇರಣ ಪ್ರಶಸ್ತಿ ಪ್ರದಾನ
ಉಡುಪಿ: ಮಹತ್ವಾಕಾಂಕ್ಷೆೆ, ಗುರಿಯನ್ನು ಇರಿಸಿಕೊಂಡು ನಿರಂತರ ಪರಿಶ್ರಮದಿಂದ ಯಾವುದೇ ಕೆಲಸಮಾಡಲು ಮುಂದಾದಾಗ ಸಮಾಜದಲ್ಲಿ ಬಹುದೊಡ್ಡ ಸಾಧನೆ ಮಾಡಲು ಸಾಧ್ಯ. ಜನಸಂಖ್ಯೆಯಲ್ಲಿ ಕಡಿಮೆಯಿದ್ದರೂ ಕ್ರೈಸ್ತರು ಸಮಾಜಕ್ಕೆೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ ಎಂದು ಲೊಂಬಾರ್ಡ್ ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಅಭಿಪ್ರಾಯಪಟ್ಟರು.
ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ (ಕೆಸಿಸಿಸಿಐ) ವತಿಯಿಂದ ಕಡಿಯಾಳಿ ಮಾಂಡವಿ ಟ್ರೇಡ್ ಸೆಂಟರ್‌ನಲ್ಲಿರುವ ಸಭಾಭವನ ದಲ್ಲಿ ಪ್ರೇರಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಉದ್ಘಾಟಿಸಿದ ಕೆಸಿಸಿಸಿಐ ಸ್ಥಾಪಕಾಧ್ಯಕ್ಷರೂ ಆದ ಮಾಂಡವಿ ಬಿಲ್ಡರ್ಸ್ & ರಿಯಲ್ ಎಸ್ಟೇಟ್‌ನ ಎಂ.ಡಿ ಡಾ.ಜೆರ್ರಿ ವಿನ್ಸೆೆಂಟ್ ಡಯಾಸ್ ಮಾತನಾಡಿ, ವ್ಯವಹಾರದಲ್ಲಿ ಎದುರಾದ ಸಮಸ್ಯೆೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ಸಂಘಟನೆ ಅತ್ಯವಶ್ಯ. ಸಾಧಕರನ್ನು ಗುರುತಿಸಿ ಸಮ್ಮಾನ, ಪ್ರಶಸ್ತಿಗಳನ್ನು ನೀಡಿದಾಗ ಇನ್ನಿತರರಿಗೂ ಪ್ರೇರಣೆಯಾಗುತ್ತದೆ ಎಂದರು.
ಪ್ರೇರಣ ಪ್ರಶಸ್ತಿಯನ್ನು ರಾಜೇಶ್ ಕುಮಾರ್ ಸಾಲಿನ್ಸ್, ಕೆರೋಲ್ ವಿಲ್ಮಾ ಡಿ’ಕುನ್ಹಾ, ನಿಯೋನ್‌ಸ್ ಅಂತೋನಿ ಡಿ’ಸೋಜಾ, ವಿಲ್ಫ್ರೆೆಡ್ ಫೆಲಿಕ್‌ಸ್ ಡಿ’ಸೋಜಾ ಅವರಿಗೆ ಪ್ರದಾನ ಮಾಡಲಾಯಿತು. ‘ಪ್ರೇರಣ ವಿಶೇಷ ಪ್ರಶಸ್ತಿ’ ಯನ್ನು ಡೇವಿಡ್ ವಿ. ಸಿಕ್ವೇರ, ಗ್ಲೆೆನ್ ಲಾರ್ಸನ್ ರೆಬೆಲ್ಲೋ ಲಾರೆನ್ಸ್ ಆಳ್ವ ಮೂಡುಬೆಳ್ಳೆೆ, ‘ಪ್ರೇರಣ ಸೇವಾ ಪ್ರಶಸ್ತಿ’ಯನ್ನು ಮ್ಯೂರಿಯಲ್ ಪ್ರೇಮಾಲತಾ, ರುಫಿನಾ ಮೆಂಡೋನ್ಸಾರಿಗೆ ನೀಡಿ ಗೌರವಿಸಲಾಯಿತು. ಶಿಕ್ಷಣ ಸಂಗೀತ, ಕ್ರೀಡೆ ಹಾಗೂ ಇತರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಗುರುತಿಸಿ ‘ಪ್ರೇರಣ ಪುರಸ್ಕಾರ’ ನೀಡಲಾಯಿತು.
ಸಮ್ಮಾನಿತರ ಪರವಾಗಿ ರಾಜೇಶ್ ಕುಮಾರ್ ಸಾಲಿನ್ಸ್ ಅಭಿಪ್ರಾಯ ವ್ಯಕ್ತಪಡಿಸಿದರು. ಕೆಸಿಸಿಸಿಐ ಅಧ್ಯಕ್ಷ ಸಂತೋಷ್ ಡಿ’ಸಿಲ್ವ ಸ್ವಾಗತಿಸಿ, ಪ್ರಸ್ತಾವನೆಗೈದರು.
ವಿಲ್ಸನ್ ಡಿಸೋಜಾ, ಡೆರಿಕ್ ಡಿ’ಸೋಜಾ ನಿರೂಪಿಸಿ, ಡಾಲ್ಫಿನ್ ಮಸ್ಕರೇನಸ್ ಅತಿಥಿಗಳನ್ನು ಪರಿಚಯಿಸಿದರು. ಸಮ್ಮಾನಿತರನ್ನು ಕೆಸಿಸಿಸಿಐ ಕೋಶಾಧಿಕಾರಿ ಮ್ಯಾಕ್ಸಿಮ್ ಎಸ್.ಸಲ್ದಾನ್ಹ, ಕೆಸಿಸಿಸಿಐ ಪ್ರಮುಖರಾದ ಜೆರಾಲ್ಡ್ ಫೆರ್ನಾಂಡಿಸ್, ಲೂವಿಸ್ ಲೋಬೊ, ವಾಲ್ಟರ್ ಸಲ್ದಾನ್ಹಾ, ಜಿತೇಂದ್ರ ಪುಟಾರ್ಡೋ, ಪ್ರಕಾಶ್ ಪಿಂಟೋ, ಜೋನ್ಸನ್ ಅಲ್ಮೇಡಾ, ಪ್ರಧಾನ ಕಾರ್ಯದರ್ಶಿ ಆಲ್ವಿನ್ ಕ್ವಾಡ್ರಸ್ ವಂದಿಸಿದರು.