ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿಯಾಗಿ ಝೈನುಲ್ ಮಾಣಿ ಉಸ್ತಾದ್ ಆಯ್ಕೆ

ಉಡುಪಿ, ಅ.5: ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿಯಾಗಿದ್ದ ತಾಜುಲ್ ಖಹಾಅ ಬೇಕಲ್ ಉಸ್ತಾದರ ವಿಯೋಗದಿಂದ ತೆರವಾದ ಸ್ಥಾನಕ್ಕೆ ನೂತನ ಖಾಝಿಯಾಗಿ ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ರಾಜ್ಯ ಪ್ರ. ಕಾರ್ಯದರ್ಶಿ ಹಾಗೂ ಕನ್ನಡ ನಾಡಿನ ಖ್ಯಾತ ವಿದ್ವಾಂಸ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್ ಅವರನ್ನು ನೇಮಿಸಲಾಗಿದೆ.

ಸಂಯುಕ್ತ ಜಮಾಅತ್ ಸರ್ವಸದಸ್ಯರ ಸಭೆಯಲ್ಲಿ ತೆಗೆದುಕೊಂಡ ಸರ್ವಾನುಮತ ಈ ತೀರ್ಮಾನವನ್ನು ಉಡುಪಿಯ ಮಣಿಪಾಲ ಇನ್ ಹೊಟೇಲಿನಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಜಮಾಅತ್ ನಿರ್ದೇಶಕ ಯು.ಕೆ. ಮುಸ್ತಸಅದಿ ಪ್ರಕಟಿಸಿದರು.

ಅ.10ರಂದು ಬೆಳಗ್ಗೆ 10ಗಂಟೆಗೆ ಮೂಳೂರು ಕೇಂದ್ರ ಮಸೀದಿಯಲ್ಲಿ ಖಾಝಿ ಸ್ವೀಕಾರ ಸಮಾರಂಭವು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾದಾತುಗಳು, ಉನ್ನತ ಉಲಮಾಗಳು, ಉಮರಾ ನಾಯಕರು ಭಾಗವಹಿಸಲಿರುವರು. ಮಾಣಿ ಉಸ್ತಾದ್, ಸಂಯುಕ್ತ ಜಮಾಅತ್ ವ್ಯಾಪ್ತಿಯ ಉಡುಪಿ ಜಿಲ್ಲೆಯ ಸುಮಾರು 100 ಮಸೀದಿಗಳಿಗೆ ಖಾಝಿಯಾಗಿ ಕಾರ್ಯನಿರ್ವಹಿಸಲಿರುವರು.

ಅದೇ ದಿನ ಬೆಳಗ್ಗೆ 11ಗಂಟೆಗೆ ಅಗಲಿದ ಶೈಖುನಾ ಖಾಝಿ ಬೇಕಲ ಉಸ್ತಾದರ ಹೆಸರಿನಲ್ಲಿ ಜಿಲ್ಲಾಮಟ್ಟದ ಪ್ರಾರ್ಥನಾ ಮಜ್ಲಿಸ್ ಹಾಗೂ ಅನು ಸ್ಮರಣಾ ಸಂಗಮ ನಡೆಯಲಿದೆ. 1997ರಲ್ಲಿ ಜಿಲ್ಲಾ ಖಾಝಿಯಾಗಿ ನೇಮಕ ಗೊಂಡ ಬೇಕಲ ಉಸ್ತಾದ್, ಸುಮಾರು 23ವರ್ಷಗಳ ಕಾಲ ಖಾಝಿಯಾಗಿ ಸೇವೆ ಸಲ್ಲಿಸಿದ್ದರು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಯುಕ್ತ ಜಮಾಅತ ಅಕ್ಷ ಹಾಜಿ ಪಿ.ಅಬೂಬಕ್ಕರ ನೇಜಾರು, ಸಂಘಟನಾ ಕಾರ್ಯದರ್ಶಿ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ,ಪ್ರ.ಕಾರ್ಯದರ್ಶಿ ಹಾಜಿ ಎಂ.ಎ.ಬಾವು ಮೂಳೂರು, ಕಾಪು ಉಸ್ತಾದ್ ಅಹ್ಮದ ಖಾಸಿಮಿ, ಮೂಳೂರು ಕೇಂದ್ರ ಮಸೀದಿ ಅಕ್ಷ ಎಂಎಚ್‌ಬಿ ಮುಹಮ್ಮದ, ಎಚ್.ಐ.ಯೂಸು ಸಖಾಫಿ ಕೋಡಿ, ಅಶ್ರ ಸಖಾಫಿ ಕನ್ನಂಗಾರ್, ಇಸ್ಮಾಯಿಲ ಮುಸ್ಲಿಯಾರ ಆಕಳಬೈಲು, ಇಸ್ಮಾಯಿಲ ಮದನಿ ಮಾವಿನಕಟ್ಟೆ, ಹಾಜಿ ಚೆರಿಯಬ್ಬ ಮಾವಿನಕಟ್ಟೆ, ಎಚ್.ಬಿ.ಮುಹಮ್ಮದ ಕನ್ನಂಗಾರ, ಅಬ್ದುರ್ರಹ್ಮಾನ ಸಖಾಫಿ ಕುಂದಾಪುರ, ಅಬ್ದುಲ ಲತೀಫು ನಾವುಂದ, ಮನ್ಸೂರ ಮರವಂತೆ, ಅಬ್ದುಲ ಸತ್ತಾರ್ ನಾವುಂದ, ಪಿ.ಎಂ.ಅಶ್ರ ಅಂಜದಿ, ಬಿಎಸ್‌ಎ ರಫೀಕ ಕುಂದಾಪುರ, ಶಹಬಾನ ಹಂಗಳೂರು, ಮುಹಮ್ಮದ ಅಲಿ ಕೋಡಿ, ಅಬ್ದುಲ ಹಮೀದ ಅದ್ದು ಮೂಳೂರು, ಅಬ್ದುಲ ಅಝೀಝ ಹೆಜಮಾಡಿ, ಕಾಸಿಂ ಬಾರ್ಕೂರು, ಹಾಜಿ ಮೊಯ್ದಿನ ಗುಡ್ವಿಲ, ಇಬ್ರಾಹಿಂ ತವಕ್ಕಲ ಉಚ್ಚಿಲ, ವೈಬಿಸಿ ಬಾವ ಮೂಳೂರು, ಅಬ್ಬು ಹಾಜಿ ಮೂಳೂರು, ಇಬ್ರಾಹಿಂ ಮಾಣಿಕೊಳಲು, ಹಾಜಿ ಕೆ.ಉಸ್ಮಾನ ಉಚ್ಚಿಲ, ಇಬ್ರಾಹಿಂ ಐಡಿಯಲ ಮಜೂರು ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!