ಕರ್ನಾಟಕ ಗಂಧದ ಗುಡಿ -ಜಯನ್ ಮಲ್ಪೆ

ಮಲ್ಪೆ: ಶ್ರೀಮಂತ ಸಂಸ್ಕೃತಿ ಮತ್ತು ಭವ್ಯ ಪರಂಪರೆಯ ಇತಿಹಾಸ ಹೊಂದಿರುವ ನಮ್ಮ ಪಾವನ ಭೂಮಿಯಾದ ಕರ್ನಾಟಕ ನಾಡಿನ ಜನತೆಗೆ ಗಂಧದ ಗುಡಿಯಿದ್ದಂತೆ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಅವರು ಇಂದು ಮಲ್ಪೆ ಕಡಲ ಕಿನಾರೆಯಲ್ಲಿ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ ಆಯೋಜಿಸಿಸ 68ನೇ ಕರ್ನಾಟಕ ರಾಜ್ಯೋತ್ಸವದ ಭುವನೇಶ್ವರಿಯ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡುತ್ತಾ,
ರಾಜ್ಯೋತ್ಸವ ಎನ್ನುವುದು ಒಂದು ವಾರ್ಷಿಕ ಜಾತ್ರೆ ಆಗಿರುವುದು ವಿರ‍್ಯಾಸ.ನವೆಂಬರ್ ತಿಂಗಳು ಮುಗಿದ ಬಳಿಕ ನಾಡು ನುಡಿಯ ಕುರಿತು ನಾವು ತಲೆಕೆಡಿಸಿಕೊಳ್ಳುಲು ಹೋಗದಿರುವುದು ದುರಾದೃಷ್ಟಕರ ಎಂದಿರುವ ಜಯನ್ ಮಲ್ಪೆ ರಾಜ್ಯದಲ್ಲಿ ಕೋಮುಸಾರಸ್ಯ,ಭಾಷಾ ಸಾಮರಸ್ಯ ಮತ್ತು ಸಾಂಸ್ಕೃತಿಕ ಸಾಮರಸ್ಯ ಏರ್ಪಟ್ಟಾಗ ಮಾತ್ರ ರಾಜ್ಯದ ಹಿತ ರಕ್ಷಣೆ ಸಾದ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಪ್ರಕಾಶ್ ಮಲ್ಪೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಮಾಜಿ ನಗರಸಭಾ ಸದಸ್ಯ ಪಾಡುರಂಗ ಮಲ್ಪೆ ಮಾತನಾಡಿ ಕನ್ನಡ ಅನ್ನ ನೀಡುವ ಭಾಷೆಯಾಗಬೇಕು ಮತ್ತು ರಾಜ್ಯದ ಐಟಿ-ಬಿಟಿ ಕಂಪೆನಿಗಳು ಕರ್ನಾಟಕದ ನೆಲ ಜಲವನ್ನು ಪ್ರೀತಿಸುವಂತಾಗಬೇಕು ಎಂದರು.
ನ್ಯಾಯವಾದಿ ಪ್ರವೀಣ್ ಪೂಜಾರಿ ಮಾತನಾಡಿ ರಾಜ್ಯದ ರಾಷ್ಟೀಕೃತ ಬ್ಯಾಂಕುಗಳಲ್ಲಿ ಕನ್ನಡ ಮಾತನಾಡುವ ಸಿಬಂದಿಗಲೇ ಮರೆಯಾಗಿದ್ದಾರೆ. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸ ನಾವೆಲ್ಲಾ ಒಟ್ಟುಸೇರಿ ಮಾಡಬೇಕೆಂದರು.

ವೇದಿಕೆಯಲ್ಲಿ ಸಮಾಜ ಸೇವಕ ಹಾಗೂ ಉದ್ಯಮಿ ಮಂಜು ಕೊಳ, ಚಂದ್ರಹಾಸ ಕಾಂಚನ್,ರಘರಾಜ್ ಬಂಗೇರ ಮತ್ತು ಅರುಣ್ ಬಂಗೇರ ಉಪಸ್ಥಿತರಿದ್ದರು.
ಹರೀಶ್ ಸಾಲ್ಯಾನ್ ಸ್ವಾಗತಿಸಿ,ಭಗವಾನ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪ್ರಾಣರಕ್ಷಕ ಈಶ್ವರ ಮಲ್ಪೆ,ಸುಗಮ ಸಂಚಾರಕ ವಿಶ್ವನಾಥ ಶೆಣೈ ಮತ್ತು ಹಿರಿಯ ರಿಕ್ಷಾ ಚಾಲಕ ಐತಪ್ಪ ಬಂಗೇರ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಬಳಿಕ ಕನ್ನಡ ಭುವನೇಶ್ವರಿ, ಕುವೆಂಪು,ಪುನೀತ್ ರಾಜ್‌ಕುಮಾರ್‌ರವರ ಟ್ಯಾಬ್ಲೋದೊಂದಿಗೆ ಸುಮಾರು 500ಕ್ಕೂ ಹೆಚ್ಚು ರಿಕ್ಷಾಗಳ ಮೆರವಣಿಗೆ ಬೀಚ್‌ನಿಂದ ಹೊರಟು ಮಲ್ಪೆ ಸುತ್ತುಮುತ್ತ ಸಾಗಿ ಕಡಲ ಕಿನಾರೆಯಲ್ಲಿ ಸಮಾಪನ ಗೊಂಡಿತು.

Leave a Reply

Your email address will not be published. Required fields are marked *

error: Content is protected !!