ಉದ್ನಾ ಜಂಕ್ಷನ್- ಮಂಗಳೂರು ಜಂಕ್ಷನ್ ನಡುವೆ ದೀಪಾವಳಿ ವಿಶೇಷ ರೈಲು
ಉಡುಪಿ, ಅ.31: ದೀಪಾವಳಿ ಹಬ್ಬದ ಪ್ರಯುಕ್ತ ಜನರ ನೂಕುನುಗ್ಗಲನ್ನು ನಿಭಾಯಿಸಲು ಉದ್ನಾ ಜಂಕ್ಷನ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಾರದಲ್ಲಿ ಎರಡು ಬಾರಿ ವಿಶೇಷ ಟಿಕೇಟ್ ದರದಲ್ಲಿ ವಿಶೇಷ ರೈಲು ಸಂಚಾರವನ್ನು ಪ್ರಾರಂಭಿಸಲು ಕೊಂಕಣ ರೈಲ್ವೆ ಸಿದ್ದವಾಗಿದೆ.
ರೈಲು ನಂ.09057 ಉದ್ನಾ ಜಂಕ್ಷನ್- ಮಂಗಳೂರು ಜಂಕ್ಷನ್ ವಾರದಲ್ಲಿ ಎರಡು ಬಾರಿ ವಿಶೇಷ ದರದಲ್ಲಿ ಸಂಚರಿಸುವ ರೈಲು ಶುಕ್ರವಾರ ಮತ್ತು ರವಿವಾರ ನವೆಂಬರ್ 3, 5, 10, 12, 17, 19, 24, 26 ಡಿಸೆಂಬರ್ 1, 3, 8, 10, 15, 17, 22, 24, 29, 31ರಂದು ಸಂಜೆ 7:45ಕ್ಕೆ ಉದ್ನಾ ಜಂಕ್ಷನ್‌ನಿಂದ ಹೊರಡಲಿದ್ದು, ಮರುದಿನ ಸಂಜೆ 7:10ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ಅದೇ ರೀತಿ ರೈಲ್ ನಂ.09058 ಮಂಗಳೂರು ಜಂಕ್ಷನ್ – ಉದ್ನಾ ಜಂಕ್ಷನ್ ವಾರದಲ್ಲಿ ಎರಡು ಬಾರಿ ವಿಶೇಷ ದರದಲ್ಲಿ ಸಂಚರಿಸುವ ರೈಲು ಶನಿವಾರ ಮತ್ತು ಸೋಮವಾರ ನವೆಂಬರ್ 4, 6, 11, 13, 18, 20, 25, 27, ಡಿಸೆಂಬರ್ 2, 4, 9, 11, 16, 18, 23, 25, 30, 2024ರ ಜನವರಿ 1ರಂದು ರಾತ್ರಿ 9:10ಕ್ಕೆ ಮಂಗಳೂರು ಜಂಕ್ಷನ್‌ನಿಂದ ಪ್ರಯಾಣ ಬೆಳೆಸಿ ಮರುದಿನ ರಾತ್ರಿ 9:30ಕ್ಕೆ ಉದ್ನಾ ಜಂಕ್ಷನ್ ತಲುಪಲಿದೆ.
ಈ ರೈಲಿಗೆ ವಲ್ಸಾಡು, ವಾಪಿ, ಪಾಲ್ಗಾರ್, ವಾಸೈ ರೋಡ್, ಬಿವಂಡಿ ರೋಡ್, ಪನ್ವೇಲ್, ರೋಹಾ, ಮಂಗಾವ್, ಖೇಡ್, ಚಿಪ್ಳುಣ್, ಸಂಗಮೇಶ್ವರ ರೋಡ್, ರತ್ನಗಿರಿ, ರಾಜಪುರ ರೋಡ್, ವೈಭವವಾಡಿ ರೋಡ್, ಕಂಕವಾಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರೋಡ್, ಥೀವಿಂ, ಕರ್ಮಾಲಸಿ, ಕಣಕೋಣ,ಕಾರವಾರ, ಅಂಕೋಲ, ಗೋಕರ್ಣ ರೋಡ್, ಕುಮಟ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಹಾಗೂ ಸುರತ್ಕಲ್ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.
ಈ ವಿಶೇಷ ರೈಲು ಒಟ್ಟು 22 ಕೋಚ್‌ಗಳೊಂದಿಗೆ ಸಂಚರಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.