ಉಡುಪಿ/ಮಂಗಳೂರು: ಹೆಸರಾಂತ “ಆಭರಣ” ಮಳಿಗೆಗೆ ಐಟಿ ದಾಳಿ
ಉಡುಪಿ: ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ “ಆಭರಣ”ಸಂಸ್ಥೆಯ ವಿವಿಧ ಶೋ ರೂಮ್, ಮಾಲಕರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆಭರಣ ಸಂಸ್ಥೆಯ ಪುತ್ತೂರು, ಕುಂದಾಪುರ, ಮಂಗಳೂರು ಸಹಿತ ಹಲವು ಭಾಗಗಳಲ್ಲಿ ಕಾರ್ಯಚರಿಸುತ್ತಿರುವ ಶೋ ರೂಮ್‌ಗೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಸಂಸ್ಥೆಯ ಮಾಲಕರ ಬುಡ್ನಾರ್‌ನ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಆಭರಣ ಮಳಿಗೆಯ ಎಲ್ಲಾ ಸಿಬ್ಬಂದಿಗಳನ್ನು ಹೊರಕಳುಹಿಸಿ ಚಿನ್ನಾಭರಣಗಳ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ ಐಟಿ ಅಧಿಕಾರಿಗಳು.
ಸುಭಾಷ್ ಕಾಮತ್ ಹಾಗೂ ಮಹೇಶ್ ಕಾಮತ್ ಮಾಲೀಕತ್ವದ ಆಭರಣ ಜ್ಯುವೆಲ್ಲರಿ ಕರ್ನಾಟಕದಲ್ಲಿ 14 ಹಾಗೂ ಗೋವಾದಲ್ಲಿ ಒಂದು ಮಳಿಗೆಗಳನ್ನು ಹೊಂದಿದೆ.
ದ.ಕ ಜಿಲ್ಲೆಯ ಬೆಳ್ತಂಗಡಿ, ಮಂಗಳೂರಿನ ಶಿವಭಾಗ್ ಹಾಗೂ ಕೊಟ್ಟಾರದಲ್ಲಿ ಮಳಿಗೆಗಳಿದ್ದು, ಉಡುಪಿಯ ಹಲವಡೆ ಆಭರಣ ಜ್ಯುವೆಲ್ಲರಿ ಮಳಿಗೆಗಳಿವೆ.