ಕುಂದಾಪುರ: ಮನೆ ಕಳವು ಪ್ರಕರಣದ ಖತರ್‌ನಾಕ್ ಆರೋಪಿಗಳ ಬಂಧನ
ಕುಂದಾಪುರ : ಇಲ್ಲಿನ ಬಸ್ರೂರು ಮತ್ತು ಕುಂದಾಪುರ ರೈಲ್ವೆ ನಿಲ್ದಾಣದ ವಸತಿ ಗೃಹಗಳಲ್ಲಿ ಕಳೆದ ವರ್ಷ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಪ್ರಕರಣದ ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಕುಂದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರು ಹೊನ್ನಾವರದ ವಿಲ್ಸನ್ ಪಿಯಾದಾಸ್ ಲೋಪೀಸ್, ತೆಕ್ಕಟ್ಟೆ ಗಂಗಾಧರ. ಬಂಧಿತರಿಂದ ಸುಮಾರು 64.760 ಗ್ರಾಂ ಚಿನ್ನ ಹಾಗೂ 112 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕುಂದಾಪುರ ಗ್ರಾಮಾಂತರ ಠಾಣಾ ಪಿ ಎಸ್ ಐ ರಾಜ್ ಕುಮಾರ್, ಶಂಕರನಾರಾಯಣ ಪೊಲೀಸ್ ಠಾಣೆ ಪಿ ಎಸ್ ಐ ಶ್ರೀಧರ್ ನಾಯ್ಕ ಸೇರಿದಂತೆ ಠಾಣಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.