ಕೊರೊನಾ ಗೆದ್ದ 18 ಮಕ್ಕಳಿಗೆ ಡ್ರಾಯಿಂಗ್ ಬುಕ್, ಚಾಕ್ಲೇಟ್ ಕೊಟ್ಟು ಬೀಳ್ಕೊಟ್ಟ ಡಿಸಿ

ಉಡುಪಿ: ಮಹಾಮಾರಿ ಕೊರೊನಾ ವಿರುದ್ಧ ಕಳೆದ ಹತ್ತು ದಿನಗಳಿಂದ ಹೋರಾಡಿದ ಹದಿನೆಂಟು ಮಕ್ಕಳು ರೋಗ ಗೆದ್ದು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಮಕ್ಕಳಿಗೆ ಗಿಫ್ಟ್, ಚಾಕ್ಲೇಟ್ ಕೊಟ್ಟು ಉಡುಪಿ ಡಿಸಿ ಇಂದು ಅವರನ್ನೆಲ್ಲಾ ಮನೆಗೆ ಕಳುಹಿಸಿಕೊಟ್ಟರು.

ಜಿಲ್ಲೆಯಲ್ಲಿ ಇಂದು ಒಂದೇ ದಿನ 45 ಮಂದಿ ಪಾಸಿಟಿವ್ ಕೊರೊನಾ ಇದ್ದವರು ರೋಗಮುಕ್ತರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಪೈಕಿ 18 ಮಕ್ಕಳನ್ನು ಟಿಎಂಎ ಪೈ ಕೋವಿಡ್ 19 ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಉಡುಪಿ ಜಿಲ್ಲಾಡಳಿತ ಮತ್ತು ಉಡುಪಿ ಜಿಲ್ಲಾಸ್ಪತ್ರೆಯ ವೈದ್ಯರು ಮಕ್ಕಳನ್ನು ಶುಭಕೋರಿ ಕಳುಹಿಸಿಕೊಟ್ಟಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಜಿ ಜಗದೀಶ್, ಇಂದು ಉಡುಪಿಯ ಟಿಎಂಎ ಪೈ ಆಸ್ಪತ್ರೆಯಿಂದ 18 ಮಕ್ಕಳು ಸೇರಿದಂತೆ 45 ಜನರು ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದಿದ್ದಾರೆ.

ಸರಕಾರದ ನೂತನ ನಿಯಮದ ಪ್ರಕಾರ ಕೋವಿಡ್ ಲಕ್ಷಣ ಇಲ್ಲದೇ ಇರುವ ಏಳು ದಿನಕ್ಕಿಂದ ಹೆಚ್ಚಿನ ಚಿಕಿತ್ಸೆ ಪೂರೈಸಿದ ಸೋಂಕಿತರಿಗೆ ನೆಗೆಟಿವ್ ವರದಿಯಾದವರನ್ನು ಇಂದು ಬಿಡುಗಡೆ ಮಾಡಲಾಗಿದೆ. ಅವರು ಮುಂದಿನ ದಿನಗಳಲ್ಲಿ ಮನೆಯಲ್ಲಿ ಎಚ್ಚರದಿಂದ ಇರಬೇಕು, ಸೋಂಕು ಲಕ್ಷಣ ಕಂಡುಬಂದರೆ ತಿಳಿಸಬೇಕು ಎಂದಿದ್ದಾರೆ.

ಮಕ್ಕಳ ಪೋಷಕರು ಮಾತನಾಡಿ, ಆಸ್ಪತ್ರೆಯಲ್ಲಿ ಮನೆಯ ವಾತಾವರಣ ಇತ್ತು. ಡಾ. ಶಶಿಕಿರಣ್ ಚಿಕಿತ್ಸೆ ಕೊಡುವ ಜೊತೆ ಮಾನಸಿಕವಾಗಿ ಕೂಡ ಸ್ಥೈರ್ಯವನ್ನು ತುಂಬುತ್ತಿದ್ದರು. ಆಕಸ್ಮಾತಾಗಿ ಮಹಾರಾಷ್ಟ್ರದಲ್ಲಿ ಮತ್ತು ದುಬೈಯಲ್ಲಿ ಈ ರೋಗ ಅಂಟಿಕೊಂಡಿತು. ಈಗ ಸಂಪೂರ್ಣವಾಗಿ ಗುಣಮುಖವಾಗಿ ಮನೆಗೆ ಹೋಗುತ್ತಿರುವುದು ಖುಷಿಯಾಗಿದೆ ಎಂದರು.

ನಾಗರಿಕರು ಮಾಸ್ಕ್ ಧರಿಸಿದೇ ಓಡಾಡಿದರೆ ಅವರಿಗೆ ದಂಡ ವಿಧಿಸಲಾಗುವುದು. ಇದು ಮರುಕಳಿಸಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

1 thought on “ಕೊರೊನಾ ಗೆದ್ದ 18 ಮಕ್ಕಳಿಗೆ ಡ್ರಾಯಿಂಗ್ ಬುಕ್, ಚಾಕ್ಲೇಟ್ ಕೊಟ್ಟು ಬೀಳ್ಕೊಟ್ಟ ಡಿಸಿ

  1. Good luck. Discharge of 45 people is a happy news for Udupi dist citizens. Wearing the mask or face cover should be strictly practiced by all people of Udupi dist. , and safeguard the life of the people.

Leave a Reply

Your email address will not be published. Required fields are marked *

error: Content is protected !!