ಮಣಿಪಾಲ: ಎಂಐಟಿ ವಿದ್ಯಾರ್ಥಿ ಬಂಧನ, 15 ಲಕ್ಷ ಮೌಲ್ಯದ ನಿದ್ರಾಜನಕ ಮಾತ್ರೆ ವಶಕ್ಕೆ
ಮಣಿಪಾಲ: (ಉಡುಪಿ ಟೈಮ್ಸ್ ವರದಿ) ಉಡುಪಿ ಐಎಸ್ ಡಿ ಘಟಕದ ಪೊಲೀಸರು ಮತ್ತು ಮಣಿಪಾಲ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಮಣಿಪಾಲದ ಎಂಐಟಿ ವಿದ್ಯಾರ್ಥಿಯೊರ್ವನನ್ನು ಬಂಧಿಸಿ ಹದಿನೈದು ಲಕ್ಷ ಮೌಲ್ಯದ ನಿಷೇಧಿತ ನಿದ್ರಾಜನಕ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೆರಂಪಳ್ಳಿ ಶೀಂಬ್ರಾ ಬ್ರಿಡ್ಜ್ ಬಳಿ ನಿಷೇಧಿತ ಮಾದಕ ವಸ್ತು ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಮಾಹಿತಿ ಪಡೆದ ಪೊಲೀಸರು ಮಣಿಪಾಲ ಎಂಐಟಿ ವಿದ್ಯಾರ್ಥಿ ಹಿಮಾಂಶು ಜೋಶಿ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನ ಬಳಿ 498 ನಿಷೇಧಿತ ನಿದ್ರಾಜನಕ (ಎಂಡಿಎಮ್ ಎ) 14,94,000/- ರೂ ಮೌಲ್ಯದ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿತನ ಇನ್ಸ್ಟ್ರುಮೆಂಟೇಷನ್ ಅಂಡ್ ಕಂಟ್ರೋಲ್ ವಿಭಾಗ 7ನೇ ಸೆಮಿಸ್ಟರ್ ನ ಮಣಿಪಾಲ ಎಂಐಟಿ ಕಾಲೇಜಿನ ವಿದ್ಯಾರ್ಥಿ ಆಗಿರುತ್ತಾನೆ. ಆರೋಪಿಯ ದ್ವಿಚಕ್ರ ವಾಹನ ಹಾಗೂ ಒಂದು ಮೊಬೈಲ್ ಫೋನ್ ನನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ.
ಉಡುಪಿ ಐಎಸ್ ಡಿ ಘಟಕ ಪೊಲೀಸ್ ನಿರೀಕ್ಷಕ ಪಿ ಎಸ್ ಮಧು, ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್ ಎಂ ಗೌಡ, ಪೊಲೀಸ್ ಉಪನಿರೀಕ್ಷಕ ರಾಜ್ ಶೇಖರ್ ವಂದಲಿ, ಉಡುಪಿ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ನಾಗರಾಜ್ ಹಾಗೂ ಸಿಬ್ಬಂದಿಗಳಾದ ಶೈಲೇಶ್, ಥಾಮ್ಸನ್, ಪ್ರಸನ್ನ, ಮಂಜುನಾಥ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಆದರ್ಶ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಾರೆ.