ರೌಡಿ ಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣ: ಮತ್ತೆ ನಾಲ್ವರ ಬಂಧನ

ಉಡುಪಿ:(ಉಡುಪಿ ಟೈಮ್ಸ್ ವರದಿ) ಹಿರಿಯಡ್ಕ ಪೇಟೆಯಲ್ಲಿ ನಡು ರಸ್ತೆಯಲ್ಲಿ ಹಾಡು ಹಗಲಲ್ಲೇ ಪಡುಬಿದ್ರೆ ಇನ್ನಾ ನಿವಾಸಿ ಕಿಶನ್ ಹೆಗ್ಡೆ(42) ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಾಟಿಪಳ್ಳ ನಿವಾಸಿ ಸಚಿನ್ ಡಿ ಅಮೀನ್ ಯಾ ಸಚ್ಚಿ (37), ಅಕ್ಷಯ್ ಶೆಟ್ಟಿಗಾರ್ (26), ಚೇತನ್ ಯಾನೆ ಚೇತು (23) ಮತ್ತು ಸಂಜೀತ್ ಪ್ರಧಾನ್ ಯಾನೆ ಶೈಲೇಶ (19) ಎಂದು ಗುರುತಿಸಲಾಗಿದೆ

ಕಳೆದ ಸಪ್ಟೆಂಬರ್ 24 ರಂದು ಹಿರಿಯಡ್ಕ ಪೇಟೆಯಲ್ಲಿ ಹಾಡು ಹಗಲಲ್ಲೇ ಇನ್ನಾ ನಿವಾಸಿ ಕಿಶನ್ ಹೆಗ್ಡೆ ಕೊಲೆ ನಡೆದಿದ್ದು ಈ ಕೊಲೆ ಪ್ರಕರಣವನ್ನು ಭೇದಿಸಲು 4 ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ಪ್ರಕರಣದಲ್ಲಿ ಈ ಮೊದಲು ಪ್ರಮುಖ ಐದು ಆರೋಪಿಗಳನ್ನು ಬಂಧಿಸಲಾಗಿತ್ತು, ಕೊಲೆ ಪ್ರಕರಣದಲ್ಲಿ ಕೃತ್ಯ ನಡೆಸಿದ ತಲೆಮರೆಸಿಕೊಂಡಿರುವ ೪ ಜನ ಆರೋಪಿಗಳನ್ನು ಶುಕ್ರವಾರ ಸುರತ್ಕಲ್ ಬಳಿ ಪತ್ತೆ ಹಚ್ಚಿ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರಾದ ಅನಂತ ಪದ್ಮನಾಭ ಹಾಗೂ ಬ್ರಹ್ಮಾವರ ಪಿ.ಎಸ್.ಐ ರಾಘವೇಂದ್ರ ಸಿ ಅವರ ವಿಶೇಷ ತಂಡ ಬಂಧಿಸಿದೆ.

ಈ ಆರೋಪಿಗಳಲ್ಲಿ ಸಚಿನ್ ಡಿ ಅಮೀನ್ ಯಾ ಸಚ್ಚಿ ಈತನು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ರೌಡಿ ಹಾಳ ಹೊಂದಿದ್ದು ಹಾಗೂ ಆತನ ವಿರುದ್ಧ ಕೊಲೆ, ಕೊಲೆಗೆ ಪ್ರಯತ್ನ, ಅಪಹರಣ, ಹಲ್ಲೆ ಹಾಗೂ ಇ.ಸಿ ಕಾಯ್ದೆ ಅಡಿಯಲ್ಲಿ ಪ್ರಕರಣಗಳು ದಾಖಲಾಗಿರುತ್ತದೆ.

ಬಂಧಿತ ಆರೋಪಿತಗಳಿಂದ ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಫ್ಟ್ ಕಾರು, ಮಾರುತಿ ರಿಟ್, ಇನೋವಾ ಕಾರು, ಪಲ್ಸರ್ ಮೋಟಾರ್ ಬೈಕ್-2, (ಒಟ್ಟು ಮೌಲ್ಯ19.50 ಲಕ್ಷ) ಹಾಗೂ ಮಂಡೆ ಕತ್ತಿ, ಸುತ್ತಿಗೆ, ತಲವಾರುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ

ಈ ಕಾರ್ಯಾಚರಣೆಯನ್ನು ಬ್ರಹ್ಮಾವರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಅನಂತಪದ್ಮನಾಭ, ವೃತ್ತ ಕಛೇರಿಯ ಎಎಸ್‌ಐ ಕೃಷ್ಣಪ್ಪ, ಸಿಬ್ಬಂದಿಯವರಾದ ಪ್ರದೀಪ್ ನಾಯಕ, ವಾಸುದೇವ ಪಿ, ಗಣೇಶ, ರವೀಂದ್ರ ಹೆಚ್, ಚಾಲಕ ಶೇಖರ್, ಬ್ರಹ್ಮಾವರ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ರಾಘವೇಂದ್ರ ಸಿ, ಸಿಬ್ಬಂದಿ ಯವರು ದಿಲೀಪ್, ಚಾಲಕ ಅಣ್ಣಪ್ಪ, ಡಿ.ಸಿ.ಐ.ಬಿ ತಂಡದ ಎ.ಎಸ್.ಐ ರವಿಚಂದ್ರನ್ ಸಿಬ್ಬಂದಿಯವರು ರಾಮು ಹೆಗ್ಡೆ & ರಾಘವೇಂದ್ರ ಮತ್ತು ಹಿರಿಯಡ್ಕ ಠಾಣೆ ಸಿಬ್ಬಂದಿಯವರು ಹರೀಶ್ ಮತ್ತು ಶಿವರಾಜ್ ಇವರು ಆರೋಪಿತರನ್ನು ಪತ್ತೆ ಹಚ್ಚಿ ಸಹಕರಿಸುತ್ತಾರೆ.

Leave a Reply

Your email address will not be published. Required fields are marked *

error: Content is protected !!