ಉಡುಪಿಯಲ್ಲಿ ಮತ್ತೆ ಮೊಳಗಲಿದೆ 1938ರ ರೇಡಿಯೋ ಮತ್ತು ಅಲರಾಂ!

ಉಡುಪಿ: ಅಜ್ಜರಕಾಡು ಭುಜಂಗ ಪಾರ್ಕ್ ನಲ್ಲಿದ ಸ್ವಾತಂತ್ರ್ಯ ಪೂರ್ವದ ರೇಡಿಯೋ ಟವರ್ ನ ಪ್ರಸಾರ ಕಾರ್ಯಕ್ಕೆ ಶಾಸಕ ರಘುಪತಿಭಟ್ ಗಾಂಧೀ ಜಯಂತಿಯ0ದು ಚಾಲನೆ ನೀಡಿದರು.

1938 ರಲ್ಲಿ ನಿರ್ಮಾಣಗೊಂಡಿರುವ ಈ ಟವರ್ ಕೆಲವು ವರ್ಷಗಳಿಂದ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದ್ದು, ಕಳೆದ ಬಾರಿಯ ಗಾಂಧೀ ಜಯಂತಿ ಕಾರ್ಯಕ್ರಮದಂದು ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ ಇದನ್ನು ದುರಸ್ತಿಗೊಳಿಸಿ, ಸಾರ್ವಜನಿಕ
ಬಳಕೆಗೆ ಅನುವು ಮಾಡಲು ಸೂಚಿಸಿದ್ದರು.


ಪ್ರಸ್ತುತ ದುರಸ್ತಿಗೊಂಡಿರುವ ಈ ಟವರ್ ಮೂಲಕ , ಪಾರ್ಕ್ ಗೆ ಆಗಮಿಸುವ ಸಾರ್ವಜನಿಕರು, ಟವರ್ ನ ಕೆಳಗಡೆ ಇರುವ ಕಲ್ಲುಬಂಡೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕುಳಿತು ಪ್ರತಿದಿನ ಸಂಜೆ 5.30 ರಿಂದ 8 ಗಂಟೆಯವರೆಗೆ ರೇಡಿಯೋ ಕಾರ್ಯಕ್ರಮಗಳನ್ನು ಆಲಿಸಬಹುದಾಗಿದೆ. ಟವರ್ ನ ಹಳೆಯ ಮೂಲ ಸ್ವರೂಪದಲ್ಲಿ ಏನೂ ಬದಲಾವಣೆ ಮಾಡದೆ, ಹೊಸ ಮೈಕ್ ಗಳು ಮತ್ತು ರೇಡಿಯೋ ಅಳವಡಿಸಿದ್ದು, ಕೇಳುಗರಿಗೆ ಹೊಸ ಅನುಭವ ನೀಡಲಿರುವ ಈ ಟವರ್ , ಹೆಚ್ಚು ಕರ್ಕಶವಿಲ್ಲದೇ ಪಾರ್ಕ್ ನೊಳಗಿನ ಕೇಳುಗರಿಗೆ ಮಾತ್ರ ಮಾರ್ಧನಿಸಲಿದೆ.

ಅಲ್ಲದೇ ಈ ಹಿಂದಿನ0ತೆ ಬೆಳಗ್ಗೆ 8,ಮಧ್ಯಾಹ್ನ 12.30 ಮತ್ತು ರಾತ್ರಿ 8 ಗಂಟೆಗೆ ಒಮ್ಮೆ ಟವರ್ ಮೂಲಕ ಅಲಾರಂ ಮೊಳಗಲಿದೆ.

2 thoughts on “ಉಡುಪಿಯಲ್ಲಿ ಮತ್ತೆ ಮೊಳಗಲಿದೆ 1938ರ ರೇಡಿಯೋ ಮತ್ತು ಅಲರಾಂ!

  1. Hats off to you G. Jaghadish.you done lot of things to udupi and neighbouring places.god gives you many more years to be with us in udupi.jai bharath and jai udupi.

Leave a Reply

Your email address will not be published. Required fields are marked *

error: Content is protected !!